ಉಡುಪಿ ಮಿಷನ್ ಆಸ್ಪತ್ರೆಯಲ್ಲಿನ ಕೊರೋನ ಶಂಕಿತ ಬಾಲಕಿ ಗುಣಮುಖ
ಉಡುಪಿ, ಎ.18: ಉಡುಪಿ ಲೋಂಬಾರ್ಡ್(ಮಿಷನ್) ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿದ ಪರಿಣಾಮ ಕೊರೋನ ವೈರಸ್ ಲಕ್ಷ್ಮಣಗಳೊಂದಿಗೆ ದಾಖಲಾಗಿದ್ದ ಶಂಕಿತ ಬಾಲಕಿಯೊಬ್ಬಳು ಸಂಪೂರ್ಣ ಗುಣಮುಖಳಾಗಿ ಆಸ್ಪತ್ರೆ ಯಿಂದ ಬಿಡುಗಡೆ ಹೊಂದಿರುವ ಬಗ್ಗೆ ವರದಿಯಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಯಾಣಪುರದ 15ವರ್ಷ ವಯಸ್ಸಿನ ಬಾಲಕಿಯನ್ನು ಚಿಕಿತ್ಸೆಗಾಗಿ ಮಾ.22ರಂದು ಆಸ್ಪತ್ರೆಗೆ ಕರೆದುಕೊಂಡು ಬರ ಲಾಗಿತ್ತು. ಆದರೆ ಆಕೆಯಲ್ಲಿ ಕಂಡುಬಂದ ಕೊರೋನ ರೋಗದ ಲಕ್ಷ್ಮಣದ ಹಿನ್ನೆಲೆಯಲ್ಲಿ ಆಕೆಯನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲು ವೈದ್ಯರು ಸೂಚಿಸಿ ದರು. ಆದರೆ ಮನೆಯವರು ಜಿಲ್ಲಾಸ್ಪತ್ರೆಗೆ ಹೋಗಲು ನಿರಾಕರಿಸಿದರು.ಆಗ ಮಿಷನ್ ಆಸ್ಪತ್ರೆಯ ವೈದ್ಯರು, ನಿರ್ದೇಶಕರು ಹಾಗೂ ಆಡಳಿತ ಮಂಡಳಿ ತೀರ್ಮಾನಿಸಿ, ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರು. ಆಕೆ ಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಉತ್ತಮ ವೈದ್ಯಕೀಯ ಸೇವೆಯ ನೆರವಿನೊಂದಿಗೆ ನಿಗಾ ಇರಿಸಲಾಯಿತು. ಆಕೆಯ ಗಂಟಿನ ದ್ರವವನ್ನು ಪರೀಕ್ಷೆಗಾಗಿ ಇಲಾಖೆಯ ಮೂಲಕ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಮಾ.24ರಂದು ಬಂದ ವರದಿಯಲ್ಲಿ ನೆಗೆಟಿವ್ ಎಂಬುದಾಗಿತ್ತು. ಅಪಾಯ ಲೆಕ್ಕಿಸದೆ ಮಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರಿಗೆ ದಾದಿ ಯರಿಗೆ ಆಡಳಿತ ಮಂಡಳಿಗೆ ಬಾಲಕಿಯ ತಂದೆ ಕೃತಜ್ಞತೆ ಸಲ್ಲಿಸಿದ್ದಾರೆ.





