ಹಿರಿಯಡ್ಕ ಜೈಲಿನಲ್ಲಿ ಹೊಸ ಖೈದಿಗಳಿಗೆ ಪ್ರತ್ಯೇಕ ಕ್ವಾರಂಟೈನ್ ಸೆಲ್
ಕೊರೋನ ಮುಂಜಾಗ್ರತಾ ಕ್ರಮ
ಉಡುಪಿ, ಎ.18: ಕೊರೋನ ವೈರಸ್ ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್‌ಡಾನ್ ಹಿನ್ನೆಲೆಯಲ್ಲಿ ಹಿರಿಯಡಕ ಅಂಜಾರಿನಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಸುರಕ್ಷಿತ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶ ದಿಂದ ಒಂದು ಪ್ರತ್ಯೇಕ ಕ್ವಾರಂಟೈನ್ ಸೆಲ್ ಮೀಸಲಿಡಲಾಗಿದ್ದು, ಹೊಸದಾಗಿ ಬರುವ ವಿಚಾರಣಾಧೀನ ಖೈದಿಗಳನ್ನು 14 ದಿನಗಳ ಕಾಲ ಈ ಸೆಲ್‌ನಲ್ಲಿ ನಿಗಾದಲ್ಲಿ ಇರಿಲಾಗುತ್ತಿದೆ.
ಲಾಕ್‌ಡೌನ್ ನಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದರಿಂದ ಈವರೆಗೆ ಜೈಲಿಗೆ ಹೊಸದಾಗಿ ಒಟ್ಟು ನಾಲ್ಕು ಮಂದಿ ವಿಚಾರಣಾಧೀನ ಖೈದಿಗಳನ್ನು ಬಂದಿದ್ದಾರೆ. ಇವರನ್ನು ವೈದ್ಯ ಕೀಯ ತಪಾಸಣೆಗೆ ಒಳಪಡಿಸಿ 14 ದಿನಗಳ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದವರನ್ನು ಕೂಡ ಮತ್ತೊಮ್ಮೆ ತಪಾಸಣೆಗೆ ಒಳಪಡಿಸಲಾಗುತ್ತದೆ. ಬಳಿಕವಷ್ಟೆ ಅವರನ್ನು ಸಮಾನ್ಯ ಸೆಲ್‌ಗೆ ಸ್ಥಳಾಂತರಿಸ ಲಾಗುತ್ತದೆ. ಜೈಲಿನಲ್ಲಿರುವ ಎಲ್ಲ ಖೈದಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸ ಲಾಗುತ್ತಿದೆ. ವೈದ್ಯಾಧಿಕಾರಿಗಳು ಕೂಡ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಯಾವುದೇ ಕೈದಿಯಲ್ಲಿ ಶೀತ, ಕೆಮ್ಮು, ಜ್ವರ ಸೇರಿದಂತೆ ಕೊರೋನ ವೈರಸ್ ಲಕ್ಷ್ಮಣ ಕಂಡುಬಂದರೆ ತಕ್ಷಣವೇ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಕಾರಗೃಹ ಅಧೀಕ್ಷಕ ಶ್ರೀನಿವಾಸ ತಿಳಿಸಿದ್ದಾರೆ.
ಸಂದರ್ಶಕರ ಸಮಯ ರದ್ದು: ಸದ್ಯ ಕಾರಗೃಹಕ್ಕೆ ಭೇಟಿ ಕೊಡುವ ಕೈದಿಗಳ ಸಂಬಂಧಿಗಳು, ಸ್ನೇಹಿತರು ಸಹಿತ ಸಂದರ್ಶಕರ ಸಮಯವನ್ನು ತಾತ್ಕಲಿಕವಾಗಿ ರದ್ದುಪಡಿಸಲಾಗಿದೆ. ಖೈದಿಗಳಿಗೆ ಜೈಲಿನಲ್ಲಿರುವ ದೂರವಾಣಿ ಮೂಲಕ ಸಂಬಂಧಿಗಳು ಮತ್ತು ವಕೀಲರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ.
ಕಾರಾಗೃಹಕ್ಕೆ ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯು ಥರ್ಮಲ್ ಗನ್ ನೀಡಿದ್ದು, ಅದರಲ್ಲಿ ಜೈಲಿನ ಒಳಗೆ ಬರುವ ಖೈದಿಗಳು, ಸಿಬ್ಬಂದಿಗಳನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿದೆ. ಅದೇ ರೀತಿ ಪ್ರವೇಶ ದ್ವಾರದಲ್ಲಿ ಕೈತೊಳೆ ಯುವ ವ್ಯವಸ್ಥೆ ಮಾಡಲಾಗಿದ್ದು, ಸ್ಯಾನಿಟೈಜರನ್ನು ಕೂಡ ಇರಿಸಲಾಗಿದೆ. ಎಲ್ಲ ಕೈದಿಗಳು ಹಾಗೂ ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಖೈದಿಗಳು ಟಿವಿ ನೋಡುವುದು ಸೇರಿದಂತೆ ಎಲ್ಲ ರೀತಿಯ ಗುಂಪು ಚಟು ವಟಿಕೆಗಳನ್ನು ಸಂಪೂರ್ಣ ನಿಲ್ಲಿಸಲಾಗಿದೆ. ಜೈಲಿನಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡ ಲಾಗಿದ್ದು, ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ಜಿಲ್ಲಾ ಕಾರಗೃಹ ಅಧೀಕ್ಷಕ ಶ್ರೀನಿವಾಸ ತಿಳಿಸಿದ್ದಾರೆ.
ಕೊರೋನ ವೈರಸ್ ಹರಡದಂತೆ ಜೈಲಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸರಕಾರ ಹಾಗೂ ಇಲಾಖೆ ನೀಡಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಖೈದಿಗಳು ಮಾತ್ರವಲ್ಲ ಕರ್ತವ್ಯ ಸಂಬಂಧ ಹೊರಗಡೆ ಹೋಗಿ ಬರುವ ಸಿಬ್ಬಂದಿಗಳ ಬಗ್ಗೆಯೂ ಎಚ್ಚರ ವಹಿಸಲಾಗುತ್ತಿದೆ. ಖೈದಿದಿಗಳ ಸಣ್ಣಪುಟ್ಟ ಅನಾರೋಗ್ಯವನ್ನು ನಿರ್ಲ್ಯಕ್ಷ ಮಾಡದೆ ವೈದ್ಯಕೀಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸುರಕ್ಷಿತ ಅಂತರ ಮತ್ತು ಶುಚಿತ್ವ ನಮ್ಮ ಆದ್ಯತೆಯಾಗಿದೆ.
- ಶ್ರೀನಿವಾಸ, ಜಿಲ್ಲಾ ಕಾರಗೃಹ ಅಧೀಕ್ಷಕ, ಹಿರಿಯಡಕ ಅಂಜಾರು ಜೈಲು







