ಯೂತ್ ಐಕೋನ್ ಹೆಲ್ಪಿಂಗ್ ಗ್ರೂಪ್‌ನಿಂದ ಕಿಟ್ ವಿತರಣೆ

ಮಂಗಳೂರು, ಎ.18: ಉಪ್ಪಿನಂಗಡಿ ಮೂಲದ ಮೈಸೂರಿನ ಉದ್ಯಮಿ ಐ.ಅಶ್ರಫ್ ಉಪ್ಪಿನಂಗಡಿಯ ನೇತೃತ್ವದಲ್ಲಿ ಆಸ್ತಿತ್ವಕ್ಕೆ ಬಂದ ಯೂತ್ ಐಕೋನ್ ಹೆಲ್ಪಿಂಗ್ ಗ್ರೂಪ್ ವತಿಯಿಂದ ಬೆಳ್ತಂಗಡಿ ತಾಲೂಕಿನ ನಲ್ಲಿಪಳಿಕೆ, ಬಾಜಾರು, ಉರ್ಲಡ್ಕ ಮತ್ತಿತರ ಹಿಂದುಳಿದ ಪ್ರದೇಶದ ಅರ್ಹ ಕುಟುಂಬಗಳಿಗೆ ಆಹಾರ ಸಾಮಗ್ರಿಯ ಕಿಟ್ ವಿತರಿಸಲಾಯಿತು.
ಉದ್ಯಮಿ ಐ.ಅಶ್ರಫ್ ಜೊತೆ ಎಸ್‌ಬಿ ದಾರಿಮಿ, ಶಬೀರ್ ಕೆಂಪಿ, ತೌಸೀಫ್ ಯುಟಿ, ಇರ್ಷಾದ್ ಯುಟಿ, ರಿಯಾಝ್ ಇಂಡಿಯನ್, ಶಬೀರ್ ನಂದಾರ್ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
Next Story





