ಮಾಧ್ಯಮಗಳ ಜಾಹೀರಾತು ಬಾಕಿ ಹಣ ಬಿಡುಗಡೆ ಮಾಡಿ: ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು, ಎ.18: ರಾಜ್ಯ ಸರಕಾರವು ಮಾಧ್ಯಮಗಳಿಗೆ ನೀಡಬೇಕಾದ ಜಾಹೀರಾತು ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಜಿಲ್ಲಾ, ಪ್ರಾದೇಶಿಕ ಮಾಧ್ಯಮ ಸೇರಿದಂತೆ ಎಲ್ಲ ಮಾಧ್ಯಮಗಳ ಆದಾಯದ ಮೂಲ ಜಾಹೀರಾತಾಗಿದೆ. ಇದಕ್ಕೆ ಸಂಬಂಧಿಸಿದ ಆದಾಯಗಳು ಮಾಧ್ಯಮಗಳಿಗೆ ಬರದೆ ಸಮಸ್ಯೆ ಎದುರಿಸುವಂತಾಗಿದೆ. ರಾಜ್ಯ ಸರಕಾರವು 2019, ಮಾರ್ಚ್‍ನಿಂದ ಮಾಧ್ಯಮಗಳ ಜಾಹೀರಾತು ಬಾಕಿ ಹಣ ಉಳಿಸಿಕೊಂಡಿದೆ. ಇದನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಗೂ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಶೇಷ ಸಂದರ್ಭವೆಂದು ಪರಿಗಣಿಸಿ ಆದ್ಯತೆ ಮೇರೆಗೆ ಎಲ್ಲ ಹಂತದ ಮಾಧ್ಯಮಗಳಿಗೂ ಜಾಹೀರಾತು ನೀಡಬೇಕೆಂದು ಅವರು ತಿಳಿಸಿದ್ದಾರೆ.
Next Story





