ಗುಜರಾತ್: ಕೊರೋನ ವೈರಸ್‌ನಿಂದ ಮೃತರ ಸಂಖ್ಯೆ 48ಕ್ಕೆ

ಅಹ್ಮದಾಬಾದ್, ಎ.18: ಗುಜರಾತ್‌ನಲ್ಲಿ ಕೊರೋನ ವೈರಸ್‌ನಿಂದ ಮತ್ತೆ 7 ಜನ ಮೃತಪಟ್ಟಿದ್ದು ಇದರೊಂದಿಗೆ ರಾಜ್ಯದಲ್ಲಿ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 48ಕ್ಕೇರಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಶನಿವಾರ ಅಹ್ಮದಾಬಾದ್‌ನಲ್ಲಿ ಐದು, ವಡೋದರ ಮತ್ತು ಸೂರತ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ ಹೇಳಿದ್ದಾರೆ. ಅಹ್ಮದಾಬಾದ್‌ನಲ್ಲಿ ಮೃತಪಟ್ಟವರಲ್ಲಿ 68 ವರ್ಷದ ಮಹಿಳೆ ಅಧಿಕ ರಕ್ತದೊತ್ತಡ ಮತ್ತು ಕ್ಷಯರೋಗದಿಂದ ಬಳಲುತ್ತಿದ್ದರು.
72 ವರ್ಷದ ಮಹಿಳೆಗೆ ಕಿಡ್ನಿ ಸಮಸ್ಯೆಯಿತ್ತು. 65 ವರ್ಷದ ಮಹಿಳೆಗೆ ಅಧಿಕ ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆಯಿತ್ತು. 50 ವರ್ಷದ ಮಹಿಳೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರೆ 70 ವರ್ಷದ ಮಹಿಳೆ ಹೃದಯದ ಕಾಯಿಲೆಗೆ ಒಳಗಾಗಿದ್ದರು ಎಂದವರು ವಿವರಿಸಿದ್ದಾರೆ.
Next Story





