ಕೊರೋನ ವೈರಸ್: ಹೈಕೋರ್ಟ್ ಸೇರಿ ಎಲ್ಲ ನ್ಯಾಯಾಲಯಗಳ ಬೇಸಿಗೆ ರಜೆ ರದ್ದು

ಬೆಂಗಳೂರು, ಎ.18: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಸರಕಾರ ಜಾರಿಗೊಳಿಸಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರಸಕ್ತ ವಾರ್ಷಿಕ ಸಾಲಿನಲ್ಲಿ ಹೈಕೋರ್ಟ್ ಸೇರಿ ಎಲ್ಲ ನ್ಯಾಯಾಲಯಗಳ ಬೇಸಿಗೆ ರಜೆ ರದ್ದುಪಡಿಸಲಾಗಿದೆ.
ಮಾ.24ರಿಂದ ಮೇ 3ರವರೆಗೆ ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ಕೋರ್ಟ್‍ಗಳಿಗೂ ರಜೆ ಘೋಷಿಸಿರುವ ಕಾರಣದಿಂದಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಈ ವರ್ಷದ ಬೇಸಿಗೆ ರಜೆಯನ್ನು ಎರಡು ವಾರಕ್ಕೆ ಸೀಮಿತಗೊಳಿಸಿದೆ.
Next Story





