ಲಾಕ್ಡೌನ್ ಹಿನ್ನೆಲೆ: ಮದುವೆ ಮುಂದೂಡಿದ ಮಳವಳ್ಳಿ ಡಿವೈಎಸ್ಪಿ ಪೃಥ್ವಿ

ಮಂಡ್ಯ, ಎ.18: ಕೊರೋನ ಲಾಕ್ಡೌನ್ ಹಿನ್ನೆಲೆಯಲ್ಲಿ ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ಎಂ.ಜೆ.ಪೃಥ್ವಿ ಅವರು ನಿಶ್ಚಯವಾಗಿದ್ದ ಮದುವೆ ಮುಂದೂಡಿದ್ದಾರೆ.
ಪೃಥ್ವಿ-ದ್ಯಾಮಪ್ಪರ ವಿವಾಹ ಎಪ್ರಿಲ್ 5ರಂದು ನಿಶ್ಚಯವಾಗಿತ್ತು. ಧಾರವಾಡದಲ್ಲಿ ಮದುವೆಯಾಗಿ, ಎಪ್ರಿಲ್ 10ರಂದು ಮೈಸೂರಿನ ಪೊಲೀಸ್ ಭವನದಲ್ಲಿ ಆರತಕ್ಷತೆಗೆ ದಿನ ನಿಗದಿಯಾಗಿತ್ತು. ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಮದುವೆ ಮುಂದೂಡಲಾಗಿದೆ.
ಡಿವೈಎಸ್ಪಿ ಪೃಥ್ವಿ ಕರ್ತವ್ಯ ನಿಷ್ಠೆಗೆ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Next Story





