Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಲಾಕ್‌ಡೌನ್‌ನಿಂದ ಪರಿಸರಕ್ಕೆ ಲಾಭ: ವಾಯು...

ಲಾಕ್‌ಡೌನ್‌ನಿಂದ ಪರಿಸರಕ್ಕೆ ಲಾಭ: ವಾಯು ಮಾಲಿನ್ಯ ಪ್ರಮಾಣದಲ್ಲಿ ಭಾರೀ ಇಳಿಕೆ

ಉಡುಪಿಯಲ್ಲಿ ಶುದ್ಧ ವಾತಾವರಣ

ನಝೀರ್ ಪೊಲ್ಯನಝೀರ್ ಪೊಲ್ಯ19 April 2020 11:46 AM IST
share
ಲಾಕ್‌ಡೌನ್‌ನಿಂದ ಪರಿಸರಕ್ಕೆ ಲಾಭ: ವಾಯು ಮಾಲಿನ್ಯ ಪ್ರಮಾಣದಲ್ಲಿ ಭಾರೀ ಇಳಿಕೆ

ಉಡುಪಿ, ಎ.18: ಕೊರೋನ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಶೇ.90ರಷ್ಟು ವಾಹನಗಳು ರಸ್ತೆಗೆ ಇಳಿಯದ ಪರಿಣಾಮ ವಾತಾವರಣದಲ್ಲಿ ಧೂಳಿನ ಕಣ, ಇಂಗಾಲದ ಮೊನಾಕ್ಸೈಡ್ ಹಾಗೂ ಗಂಧಕದ ಡೈ ಆಕ್ಸೈಡ್ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇದರಿಂದ ವಾಯು ಮಾಲಿನ್ಯ ಕಡಿಮೆಯಾಗಿ ಉಡುಪಿ ಜಿಲ್ಲೆಯ ಪರಿಸರ ಪರಿಶುದ್ಧವಾಗುತ್ತಿದೆ. ಕೈಗಾರಿಕೀಕರಣ, ರಸ್ತೆಯ ಧೂಳು, ರಸ್ತೆ ನಿರ್ಮಾಣ ಹಾಗೂ ಕಟ್ಟಡ ಕಾಮಗಾರಿ, ವಾಹನಗಳಿಂದ ಹೊರಹೊಮ್ಮುವ ಹೊಗೆಯಲ್ಲಿರುವ ಇಂಗಾಲದ ಮೊನಾಕ್ಸೈಡ್ ಹಾಗೂ ಗಂಧಕದ ಡೈ ಆಕ್ಸೈಡ್‌ಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಪ್ರಮುಖ ಅಂಶಗಳಾಗಿವೆ. ಈ ಮಾಲಿನ್ಯಕಾರಕ ಅಂಶಗಳು ನಿಗದಿತ ಮಟ್ಟಕ್ಕಿಂತ ಹೆಚ್ಚಾಗುವುದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಶೇ.90ರಷ್ಟು ವಾಯುಮಾಲಿನ್ಯಕ್ಕೆ ವಾಹನಗಳು ಉಗುಳುವ ಹೊಗೆಯೇ ಕಾರಣ ವಾಗಿವೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 4,52,665 ವಿವಿಧ ವಾಹನಗಳು ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿವೆ. ಉಡುಪಿ ನಗರವೊಂದರಲ್ಲೇ ಲಕ್ಷಕ್ಕೂ ಅಧಿಕ ಸಂಖ್ಯೆಯ ವಾಹನಗಳು ಪ್ರತಿದಿನ ಓಡಾಟ ನಡೆಸುತ್ತವೆ. ಕಳೆದ 25 ದಿನಗಳಿಂದ ಲಾಕ್‌ಡೌನ್‌ನಿಂದ ವಾಹನಗಳು ರಸ್ತೆಗೆ ಇಳಿಯದೆ, ಕೈಗಾರಿಕೆಗಳು ಕಾರ್ಯಾಚರಿಸದೆ ಹಾಗೂ ಯಾವುದೇ ಕಾಮಗಾರಿಗಳು ನಡೆಯದಿರುವುದರಿಂದ ವಾತಾವರಣದಲ್ಲಿ ಮಾಲಿನ್ಯಕಾರಕ ಅಂಶಗಳು ಕಡಿಮೆಯಾಗಿ ಪರಿಸರಕ್ಕೆ ತಕ್ಕಮಟ್ಟಿನ ಅನು ಕೂಲಗಳಾಗಿವೆ. ಸುರಕ್ಷಿತ ಮಟ್ಟದಲ್ಲಿ ವಾತಾವರಣ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಪ್ರಾದೇಶಿಕ ಕಚೇರಿಯ ಅಧೀನದಲ್ಲಿ ಉಡುಪಿ ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಕಾರ್ಯಾಚರಿಸುತ್ತಿರುವ ನಿರಂತರ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರದಲ್ಲಿ ಮುಖ್ಯವಾಗಿ ಗಾಳಿಯಲ್ಲಿರುವ ಧೂಳಿನ ಕಣಗಳು, ಕಾರ್ಬನ್ ಮೋನಾಕ್ಸೈಡ್ ಹಾಗೂ ಸಲ್ಫರ್ ಡೈ ಆಕ್ಸೈಡ್‌ಗಳನ್ನು ಮಾಪನ ಮಾಡಲಾಗುತ್ತದೆ. ಕೇಂದ್ರದಲ್ಲಿರುವ ಪರ್ಟಿಕ್ಯುಲೆಟ್ ಮಾನಿಟರ್(ಪಿಎಂ)-2.5 ಯಂತ್ರವು ಗಾಳಿಯಲ್ಲಿರುವ ಅತೀ ಸಣ್ಣ ಅಂದರೆ 2.5ಮೈಕ್ರೋ ಗ್ರಾಂ(ಎಂಜಿ) ಗಾತ್ರದ ಹಾಗೂ ಪಿಎಂ-10 ಯಂತ್ರವು 10ಎಂಜಿ ಗಾತ್ರದ ಧೂಳಿನ ಕಣಗಳನ್ನು ಮಾಪನ ಮಾಡುತ್ತವೆ. 2.5ಎಂಜಿ ಗಾತ್ರದ ಕಣಗಳು ಗಾಳಿಯಲ್ಲಿ 15-25 ಎಂಜಿ ಇದ್ದರೆ ಸುರಕ್ಷಿತ, 30-60ಎಂಜಿ ಇದ್ದರೆ ಸರಾಸರಿ ಮತ್ತು 60ಎಂಜಿಗಿಂತ ಮೇಲ್ಪಟ್ಟರೆ ಮಲಿನಯುಕ್ತ ಗಾಳಿ ಮತ್ತು 10 ಎಂಜಿ ಗಾತ್ರದ ಕಣಗಳು 15-25ಎಂಜಿ ಇದ್ದರೆ ಸುರಕ್ಷಿತ, 30-60ಎಂಜಿ ಇದ್ದರೆ ಸರಾಸರಿ, 60-100 ಎಂಜಿ ಇದ್ದರೆ ಅಲರ್ಟ್ ಹಾಗೂ 100 ಎಂಜಿಗಿಂತ ಹೆಚ್ಚಿದ್ದರೆ ಮಲಿನಯುಕ್ತ ಗಾಳಿ ಎಂಬುದಾಗಿ ಪರಿಗಣಿಸಲಾಗುತ್ತದೆ. ಪ್ರಸಕ್ತ ಉಡುಪಿ ನಗರದಲ್ಲಿ 2.5ಎಂಜಿ ಕಣಗಳು 2.00 ಎಂಜಿಯಷ್ಟಿದ್ದರೆ, 10 ಎಂಜಿ ಕಣಗಳು 10-15 ಎಂಜಿಯಷ್ಟಿದೆ. ಲಾಕ್‌ಡೌನ್‌ಗಿಂತ ಮೊದಲು ಮಾ.5ರಂದು 2.5 ಎಂಜಿ ಧೂಳಿನ ಕಣಗಳು 56 ಎಂಜಿಯಷ್ಟು ಇರುವುದು ವರದಿಯಾಗಿತ್ತು. 10 ಎಂಜಿ ಕಣಗಳು ಮಾ.1ರಂದು 77.18ರಷ್ಟು ಪ್ರಮಾಣದಲ್ಲಿ ಇದ್ದವು. 2.5. ಕಣಗಳು ಹಲವು ಬಾರಿ 60ಎಂಜಿಗಿಂತ ಮೇಲಿದ್ದವು. ಆದರೆ 10 ಎಂಜಿ ಕಣಗಳು ಈವರೆಗೆ 100ನ್ನು ಮೀರಿಲ್ಲ ಎಂದು ಕೇಂದ್ರದ ವರದಿ ತಿಳಿಸುತ್ತದೆ. ಹೀಗೆ 60ಎಂಜಿಗಿಂತ ಹೆಚ್ಚಿದ್ದ ಸಣ್ಣ ಧೂಳಿನ ಕಣಗಳ ಪ್ರಮಾಣ ಈಗ ಕೇವಲ 2 ಎಂಜಿಗೆ ಇಳಿದಿರುವುದು ನಗರದ ವಾತಾವರಣ ಸುರಕ್ಷಿತ ಎಂಬುದನ್ನು ಬಿಂಬಿಸುತ್ತದೆ.

ಇಂಗಾಲದ ಮೊನಾಕ್ಸೈಡ್ ಪ್ರಮಾಣ ಇಳಿಕೆ

ವಾಹನದ ಹೊಗೆಯಿಂದ ಬರುವ ಇಂಗಾಲದ ಮೊನಾಕ್ಸೈಡ್ ಪ್ರಮಾಣ 2 ಎಂಜಿಎಂ ಮಿತಿಗಿಂತ ಮೀರಿದರೆ ಪರಿಸರ ಮಲಿನವಾಗಿರುತ್ತದೆ. ಪ್ರಸಕ್ತ ಉಡುಪಿ ನಗರದಲ್ಲಿ ಇಂಗಾಲದ ಮೊನಾಕ್ಸೈಡ್ 0.548 ಎಜಿಎಂ ನಷ್ಟಿದ್ದರೆ, ಅದು ಲಾಕ್‌ಡೌನ್‌ಗೆ ಮೊದಲು ವಾಹನ ದಟ್ಟನೆ ಹೆಚ್ಚಿ ದ್ದಾಗ 2 ಎಂಜಿಎಂ ಮಿತಿಯನ್ನು ಮೀರಿದ್ದು ವರದಿಯಾಗಿದ್ದವು.

ಗಾಳಿಯಲ್ಲಿ ಗಂಧಕದ ಡೈ ಆಕ್ಸೈಡ್‌ನ ಪ್ರಮಾಣ 12 ಯುಜಿಎಂ ಮಿತಿಗಿಂತ ಮೀರಿದರೆ ಅಪಾಯಕಾರಿ. ಆದರೆ ಉಡುಪಿ ನಗರದಲ್ಲಿ ಈವರೆಗೆ ಈ ಪ್ರಮಾಣ ಮೀರಿಲ್ಲ. ಸದ್ಯ ಇದರ ಪ್ರಮಾಣ 8.412 ಯುಜಿಎಂನಷ್ಟಿದೆ ಎಂದು ಕೇಂದ್ರದ ವರದಿ ತಿಳಿಸುತ್ತದೆ. ಹೀಗೆ ಇವು ಎರಡು ಕೂಡ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುವ ಮೂಲಕ ಗಾಳಿಯು ಶುದ್ಧವಾಗುತ್ತಿರುವುದು ಕಂಡು ಬರುತ್ತದೆ.

ಶೇ.90ರಷ್ಟು ವಾಯು ಮಾಲಿನ್ಯವು ವಾಹನಗಳಿಂದಲೇ ಉಂಟಾಗುತ್ತದೆ. ವಾಹನಗಳ ಓಡಾಟದಿಂದ ರಸ್ತೆಯಲ್ಲಿದ್ದ ಮತ್ತು ಹೊಗೆಯಲ್ಲಿರುವ ಧೂಳಿನ ಕಣಗಳು ವಾತಾವರಣವನ್ನು ಸೇರಿಕೊಳ್ಳುತ್ತದೆ. ಈ ಗಾಳಿಯನ್ನು ಮನುಷ್ಯ ಸೇವಿಸಿದರೆ ಅಸ್ತಮಾ, ಶ್ವಾಸಕೋಸಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಈ ಹಿಂದೆ ನಿಗದಿತ ಮಟ್ಟಕ್ಕಿಂತ ಮೀರಿದ್ದ ಧೂಳಿನ ಕಣಗಳ ಸಾಂಧ್ರತೆ ಹಾಗೂ ಇಂಗಾಲದ ಮೊನಾಕ್ಸೈಡ್ ಪ್ರಮಾಣ ಈಗ ವಾಹನಗಳ ಓಡಾಟ ಇಲ್ಲದೆ ಸಾಕಷ್ಟು ಇಳಿಕೆ ಕಂಡಿದೆ.

-ವಿಜಯ ಹೆಗ್ಡೆ,

ಪರಿಸರ ಅಧಿಕಾರಿ, ಉಡುಪಿ ಜಿಲ್ಲೆ.

ಧೂಳು, ವಾಹನಗಳ ಹೊಗೆಗಳಿಂದ ಮುಖ್ಯವಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಈಗ ವಾಹನಗಳ ಓಡಾಟ ಕಡಿಮೆಯಾಗಿರುವುದರಿಂದ ಗಾಳಿಯಲ್ಲಿ ಮಾಲಿನ್ಯಕಾರಕ ಅಂಶಗಳು ಇಳಿಕೆಯಾಗಿದೆ. ಈ ವಾತಾವರಣವು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅನುಕೂಲವಾಗುತ್ತದೆ. ಈಗ ಅಲರ್ಜಿ, ಶೀತಗಳಂತಹ ಕಾಯಿಲೆ ಕಡಿಮೆಯಾಗಿರುವುದರಿಂದ ಜಿಲ್ಲಾಸ್ಪತ್ರೆಯ ಹೊರರೋಗಿಗಳ ವಿಭಾಗಗಳಿಗೆ ಬರುವ ರೋಗಿಗಳ ಸಂಖ್ಯೆ ಕೂಡ ಕಡಿಮೆಯಾಗಿದೆ.

-ಡಾ.ಮಧುಸೂದನ್ ನಾಯಕ್,

ಸರ್ಜನ್, ಜಿಲ್ಲಾಸ್ಪತ್ರೆ, ಉಡುಪಿ

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X