ಕೊರೋನ ವೈರಸ್ ‘ಮಾನವ ನಿರ್ಮಿತ’: ನೊಬೆಲ್ ಪುರಸ್ಕೃತ ವೈರಾಣು ತಜ್ಞನ ಸ್ಫೋಟಕ ಹೇಳಿಕೆ

ಹೊಸದಿಲ್ಲಿ: ಜಗತ್ತಿನಾದ್ಯಂತ ಕೋಲಾಹಲ ಸೃಷ್ಟಿಸಿರುವ ಕೊರೋನ ವೈರಸ್ ‘ಮಾನವ ನಿರ್ಮಿತ’ ಎಂದು ಫ್ರೆಂಚ್ ವೈರಾಣು ತಜ್ಞ, ವೈದ್ಯಕೀಯ ಕ್ಷೇತ್ರದ ನೋಬೆಲ್ ಪುರಸ್ಕೃತ ಲುಕ್ ಮೊಂಟನೈರ್ ಹೇಳಿಕೆ ನೀಡಿದ್ದಾರೆ. ಇದು ಚೀನಾದ ಲ್ಯಾಬ್ ವೊಂದು ಏಡ್ಸ್ ಗಾಗಿ ಲಸಿಕೆ ಸಿದ್ಧಪಡಿಸಲು ಪ್ರಯತ್ನಿಸಿದಾಗ ಸೃಷ್ಟಿಯಾದ ವೈರಸ್ ಎಂದವರು ಆರೋಪಿಸಿದ್ದಾರೆ.
ಕೊರೋನ ವೈರಸ್ ನಲ್ಲಿರುವ ಎಚ್ ಐವಿಯ ಅಂಶಗಳು ಮತ್ತು ಮಲೇರಿಯಾದ ಸೂಕ್ಷ್ಮಾಣು ಅಂಶಗಳು ಈ ವೈರಸ್ ನೈಸರ್ಗಿಕವಾಗಿ ಹುಟ್ಟಿದ್ದಲ್ಲ ಎನ್ನುವುದನ್ನು ಸಾಬೀತುಪಡಿಸುತ್ತವೆ ಎಂದು ಫ್ರೆಂಚ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಏಡ್ಸ್ ವೈರಸನ್ನು ಕಂಡು ಹಿಡಿದವರಲ್ಲಿ ಒಬ್ಬರಾದ ಮೊಂಟನೈರ್ 2008ರಲ್ಲಿ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾಗಿದ್ದರು.
ಈ ಪ್ರಮಾದವು ವುಹಾನ್ ನ್ಯಾಶನಲ್ ಬಯೋಸೇಫ್ಟಿ ಲ್ಯಾಬ್ ನಲ್ಲಿ ನಡೆದಿರಬೇಕು ಎಂದವರು ಆರೋಪಿಸಿದ್ದಾರೆ.
Next Story





