ಕೊರೋನ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ ಕಾಸರಗೋಡು ಜಿಲ್ಲೆಗೆ ಕೇಂದ್ರ ಸರಕಾರದ ಮೆಚ್ಚುಗೆ
168 ರೋಗಿಗಳಲ್ಲಿ 113 ಮಂದಿ ಗುಣಮುಖ

ಹೊಸದಿಲ್ಲಿ: ಹಲವು ಸಮಸ್ಯೆಗಳಿದ್ದರೂ ಅವುಗಳನ್ನು ಎದುರಿಸಿ, ಕೊರೋನ ವೈರಸ್ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದ ಕೇರಳದ ಕಾಸರಗೋಡು ಜಿಲ್ಲೆಯನ್ನು ಕೇಂದ್ರ ಸರಕಾರವು ಪ್ರಶಂಸಿಸಿದೆ.
ವ್ಯವಸ್ಥಿತ ವೈದ್ಯಕೀಯ ನಿರ್ವಹಣೆಯಿಂದಾಗಿ ಜಿಲ್ಲೆಯಲ್ಲಿ 168 ಕೊರೋನ ಪಾಸಿಟಿವ್ ರೋಗಿಗಳಲ್ಲಿ 113 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದು, ಒಬ್ಬನೇ ಒಬ್ಬ ಸೋಂಕಿತ ವ್ಯಕ್ತಿ ಮೃತಪಟ್ಟಿಲ್ಲ ಎಂದು ಜಿಲ್ಲೆಯ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪರಸ್ಪರ ಸಹಕಾರಕ್ಕಾಗಿ ಕಾಸರಗೋಡಿನಲ್ಲಿ ವಿಶೇಷ ರಾಜ್ಯ ಅಧಿಕಾರಿಯನ್ನು ಕಾಸರಗೋಡಿನಲ್ಲಿ ನೇಮಿಸಿದ ಕೇರಳದ ಕಾರ್ಯತಂತ್ರದ ಬಗ್ಗೆ, ಹೋಮ್ ಕ್ವಾರಂಟೈನ್ ನಲ್ಲಿದ್ದವರ ಮೇಲೆ ನಿಗಾ ಇಡಲು ಡ್ರೋನ್ ಗಳ ಬಳಕೆ, ಸುರಕ್ಷಿತ ಅಂತರ ಕಾಪಾಡಲು #BreakTheChain ಎಂಬ ಆಂದೋಲನದ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
Next Story





