ಅಂಗನವಾಡಿ, ಬಿಸಿಯೂಟ ನೌಕರರಿಗೆ ಕಿಟ್ ವಿತರಣೆ

ಉಡುಪಿ, ಎ.19: ಲಾಕ್‌ಡೌನ್ ಮುಂದುವರಿದಿರುವುದರಿಂದ ಕಾರ್ಮಿಕ ವರ್ಗದ ಸಂಕಷ್ಟಗಳನ್ನು ಅರಿತ ಸಿಐಟಿಯು ಸಂಘಟನೆಯು ಮುಖಂಡ ಬಾಲಕೃಷ್ಣ ಶೆಟ್ಟಿ ಕುಟುಂಬದ ಸಹಾಯದೊಂದಿಗೆ ಬಿಸಿಯೂಟ ಹಾಗೂ ಅಂಗನವಾಡಿ ನೌಕರರಿಗೆ ಉಡುಪಿಯ ಸಿಐಟಿಯು ಕಚೇರಿಯಲ್ಲಿ ಆಹಾರದ ಕಿಟ್‌ಗಳನ್ನು ವಿತರಿಸಿತು.
ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಬಿಸಿಯೂಟ ನೌಕರರ ಸಂಘದ ಉಡುಪಿ ತಾಲೂಕು ಕಾರ್ಯದರ್ಶಿ ಕಮಲ ಅವರ ಸಹಕಾರ ದೊಂದಿಗೆ ಉಡುಪಿ, ಕಾಪು, ಬ್ರಹ್ಮಾವರದಲ್ಲಿಯೂ ಅಕ್ಕಿಯನ್ನು ವಿತರಿಸ ಲಾಯಿತು. ಅದೇ ರೀತಿ ಕುಂದಾಪುರದಲ್ಲಿಯೂ ಸಿಐಟಿಯು ಕಾರ್ಯಕರ್ತರು ದಾನಿಗಳ ಸಹಕಾರದೊಂದಿಗೆ ಬಡ ಕಾರ್ಮಿಕರಿಗೆ ನಿರಂತರವಾಗಿ ದಿನಬಳಕೆಯ ವಸ್ತುಗಳನ್ನು ವಿತರಣೆ ಮಾಡುತ್ತಿದ್ದಾರೆ ಎಂದು ಸಿಐಟಿಯು ಪ್ರಕಟಣೆಯಲ್ಲಿ ತಿಳಿಸಿದೆ.
Next Story





