ಕುದ್ರೋಳಿ ಜಾಮಿಯಾ ಜಮಾಅತರಿಗೆ ಕಿಟ್ ವಿತರಣೆ
ಮಂಗಳೂರು, ಎ.19: ಕುದ್ರೋಳಿಯ ಜಾಮಿಯಾ ಮಸೀದಿಯ ಅಧ್ಯಕ್ಷ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್ ಅವರು ವೈಯಕ್ತಿಕ ನೆಲೆಯಲ್ಲಿ ನೀಡಲಾದ ರಮಝಾನ್ ಕಿಟ್‌ನ್ನು ರವಿವಾರ ಮಸ್ಜಿದ್ ವ್ಯಾಪ್ತಿಯ ಅರ್ಹ ಕುಟುಂಬಗಳಿಗೆ ವಿತರಿಸಲಾಯಿತು.
ಮಸೀದಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಕಿಟ್ ಹಸ್ತಾಂತರಿಸಿದರು. ಮಸೀದಿಯ ಖತೀಬ್ ಹಾಜಿ ಅಬ್ದುಲ್ ಮನ್ನಾನ್ ಮುಫ್ತಿ ದುಆಗೈದರು. ಮಸೀದಿಯ ಉಪಾಧ್ಯಕ್ಷ ಹಾಜಿ ಯೂಸುಫ್ ಕರ್ಧಾರ್, ಪ್ರಧಾನ ಕಾರ್ಯದರ್ಶಿ ಎಸ್.ಎ.ಖಲೀಲ್, ಕಾರ್ಯದರ್ಶಿ ಹಾಜಿ ಮಕ್ಭೂಲ್ ಅಹ್ಮದ್, ಕಾರ್ಪೊರೇಟರ್ ಶಂಶುಧ್ಧೀನ್ ಎಚ್‌ಬಿಟಿ, ಸದಸ್ಯರಾದ ಹಾಜಿ ಸೈಯದ್ ಇಕ್ಬಾಲ್, ಖಾಲಿಕ್, ಹಾಜಿ ಅಶ್ಫಾಕ್ ಅಹ್ಮದ್, ಡಾ. ಆರೀಫ್ ಮಸೂದ್, ಆಬಿದ್ ಜಲಿಹಲ್, ಹಾಜಿ ಸಲೀಮ್ ಉಪಸ್ಥಿತರಿದ್ದರು.
Next Story





