ಕೋರೊನ ರೋಗದ ಮುನ್ನೆಚ್ಚರಿಕಾ ಪ್ರಾತ್ಯಕ್ಷಿಕೆ

ಉಡುಪಿ, ಎ.19: ಐಆರ್‌ಸಿಎಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ತರಬೇತಿ ಸಂಸ್ಥೆಯ ಕರೋನಾ ವಾರಿಯರ್ಸ್ ವತಿಯಿಂದ ಸಾಮಾಜಿಕ ಅಂತರ ಮತ್ತು ಕೋರೊನ ಸಾಂಕ್ರಾಮಿಕ ರೋಗದ ಮುನ್ನೆಚ್ಚರಿಕ ಪ್ರಾತ್ಯಕ್ಷಿಕೆಯನ್ನು ಬೀಡಿನಗುಡ್ಡೆ ತರಕಾರಿ ರಖಂ ಮಾರುಕಟ್ಟೆಯಲ್ಲಿ ಇಂದು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಹೇಶ್ ಗುಂಡಿಬೈಲ್ ಮತ್ತು ಬಿ.ಕೆ.ಬಸವರಾಜ್ ಉಚಿತವಾಗಿ ನೀಡಿದ ತರಕಾರಿಯನ್ನು ಸಮಾಜ ಸೇವಕ ಅನ್ಸಾರ್ ಅಹಮ್ಮದ್ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಸಂಸ್ಥೆಯವರಿಗೆ ಹಸ್ತಾಂತರಿಸಿದರು.
ಐಆರ್‌ಸಿಎಸ್ ಮತ್ತು ಕರೋನಾ ವಾರಿಯರ್ಸ್‌ನ ಡಾ.ರೋಶನ್ ಕುಮಾರ್, ನಾಗರಾಜ್ ಶೇಟ್ ಪ್ರಾತ್ಯಕ್ಷಿಕೆ ನೀಡಿದರು. ಡಿಡಬ್ಲ್ಯೂಡಿಎಸ್‌ಸಿ ಇಲಾಖೆಯ ಅನುಷಾ ಮತ್ತು ಸುಬ್ರಹ್ಮಣಿ ಸಹಕರಿಸಿದರು.
Next Story





