ಯುಎಇ; ಸೋಂಕಿತರಿಗೆ ಪ್ರತ್ಯೇಕ ವಾಸ್ತವ್ಯ ವ್ಯವಸ್ಥೆ: ಭಾರತೀಯ ರಾಯಭಾರಿ ಕಚೇರಿ

ದುಬೈ,ಎ.19: ಇತರರ ಜೊತೆ ವಾಸವಾಗಿರುವಂತಹ ಅನಿವಾಸಿ ಭಾರತೀಯರ ಪೈಕಿ ಯಾರಾದರೂ ಕೊರೋನ ಪಾಸಿಟಿವ್ ಆಗಿರುವುದು ದೃಢಪಟ್ಟಲ್ಲಿ ಅವರಿಗೆ ಪ್ರತ್ಯೇಕವಾದ ವಾಸ್ತವ್ಯದ ವ್ಯವಸ್ಥೆಯನ್ನು ಮಾಡುವುದಾಗಿ ಯುಎಇನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ರವಿವಾರ ತಿಳಿಸಿದೆ.
ಅಂತಾರಾಷ್ಟ್ರೀಯ ಪ್ರಯಾಣದ ಮೇಲಿನ ನಿಷೇಧವನ್ನು ಹಿಂತೆಗೆದ ಬಳಿಕ ಯುಎಇನಿಂದ ಭಾರತೀಯರ ವಾಪಸಾತಿಗೆ ಕ್ರಮಗಳನ್ನು ಕೈಗೊಳ್ಳುವುದಾಗಿ ಭಾರತದ ರಾಯಭಾರಿ ಪವನ್ ಕಪೂರ್ ತಿಳಿಸಿದ್ದಾರೆ.
Next Story





