ಪೊಲೀಸ್ ಇಲಾಖೆ ಹೊಸ ಪಾಸ್ ವಿತರಣೆ ಮಾಡುವುದಿಲ್ಲ: ಪ್ರವೀಣ್ ಸೂದ್

ಬೆಂಗಳೂರು, ಎ.19: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ಜಾರಿಗೊಳಿಸಿರುವ ಹಿನ್ನೆಲೆ ಯಾವುದೇ ರೀತಿಯ ಹೊಸ ಪಾಸ್‍ಗಳನ್ನು ಪೊಲೀಸ್ ಇಲಾಖೆ ವಿತರಣೆ ಮಾಡುವುದಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ರವಿವಾರ ಈ ಕುರಿತು ಟ್ವಿಟ್ ಮಾಡಿರುವ ಅವರು, ಅಗತ್ಯ ಸೇವೆಗಳನ್ನ ಒದಗಿಸುವುದಕ್ಕಾಗಿ ನೀಡಿರುವ ಎಲ್ಲಾ ಪಾಸ್‍ಗಳೂ ಮೇ.3 ರವರೆಗೆ ಚಾಲ್ತಿಯಲ್ಲಿರುತ್ತವೆ. ಆದರೆ, ಇನ್ಮುಂದೆ ಯಾವುದೇ ಹೊಸ ಪಾಸ್‍ಗಳನ್ನ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಎಚ್ಚರಿಕೆ: ಲಾಕೌಡೌನ್ ಹಿನ್ನೆಲೆ ಅಗತ್ಯ ಸೇವೆ ಹೆಸರಲ್ಲಿ ಓಡಾಡುವವರಿಗೆ ಪೊಲೀಸ್ ಇಲಾಖೆಯಿಂದ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅನಗತ್ಯವಾಗಿ ಸಂಚಾರ ಮಾಡುವವರ ವಿರುದ್ಧ ಕ್ರಮ ಜರುಗಿಸಿ, ದಂಡ ವಿಧಿಸಲಾಗುವುದು ಎಚ್ಚರಿಕೆ ನೀಡಿದ್ದಾರೆ.
Next Story





