ಒಂದೇ ದಿನ 5,508 ಕೋವಿಡ್-19 ಪರೀಕ್ಷೆ ನಡೆಸಿ ದಾಖಲೆ ನಿರ್ಮಿಸಿದ ಆಂಧ್ರ ವೈದ್ಯರು
ಅಮರಾವತಿ,ಎ.20: ಒಂದೇ ದಿನದಿಲ್ಲಿ 5,508 ಕೋವಿಡ್-19 ಪರೀಕ್ಷೆಯನ್ನು ನಡೆಸಿದ ಆಂಧ್ರಪ್ರದೇಶದ ವೈದ್ಯರು ದಾಖಲೆ ನಿರ್ಮಿಸಿದರು. ವೈದ್ಯರ ಈ ಸಾಹಸದಿಂದಾಗಿ ಗರಿಷ್ಠ ಪ್ರಮಾಣದಲ್ಲಿ ಕೋವಿಡ್-19 ಪರೀಕ್ಷೆ ನಡೆಸಿದ ರಾಜ್ಯಗಳ ಪೈಕಿ ಆಂಧ್ರ ಎರಡನೇ ಸ್ಥಾನ ಪಡೆದಿದೆ.
ಶನಿವಾರ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ ರೆಡ್ಡಿ ನೇತೃತ್ವದಲ್ಲಿ ಕೊರೋನ ವೈರಸ್ ನಿಯಂತ್ರಣಕ್ಕೆ ಸರಕಾರ ನಡೆಸುತ್ತಿರುವ ಕಾರ್ಯಕ್ರಮದ ಪ್ರಗತಿ ಪರಾಮರ್ಶೆ ಸಭೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.
ವೈದ್ಯರು ಶುಕ್ರವಾರ ರ್ಯಾಪಿಡ್ ಕಿಟ್ಗಳನ್ನು ಬಳಸದಯೇ ಸಂಪೂರ್ಣ ಏಕಾಗ್ರತೆಯಿಂದ ಪರೀಕ್ಷೆ ನಡೆಸಿ ದಾಖಲೆ ನಿರ್ಮಿಸಿದ್ದಾರೆ.ಪ್ರತಿದಿನ 17,500 ಪರೀಕ್ಷೆಯನ್ನು ನಡೆಸುವ ಮೂಲಕ 10 ದಿನಗಳಲ್ಲಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗುವುದು.ವೈರಸ್ ಹಾವಳಿ ಹೆಚ್ಚಾಗಿರುವ ಗುಂಟೂರು, ಕರ್ನೂರು, ಕೃಷ್ಣ ಹಾಗೂ ನೆಲ್ಲೋರ್ ಜಿಲ್ಲೆಗಳಲ್ಲಿ ಹೆಚ್ಚಿನ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Next Story