ಕೊರೋನ: ಕಾಸರಗೋಡು ಜಿಲ್ಲೆಯಲ್ಲಿ 16 ಹಾಟ್ ಸ್ಪಾಟ್ ಗಳು

ಕಾಸರಗೋಡು, ಎ.20: ಕೇರಳದ ಕೊರೋನ ಹಾಟ್ ಸ್ಪಾಟ್ ಸ್ಥಳಗಳನ್ನು ಆರೋಗ್ಯ ಇಲಾಖೆ ಘೋಷಿಸಿದೆ. ರಾಜ್ಯದಲ್ಲಿ 88 ಗ್ರಾಮ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಮಧೂರು, ಮೊಗ್ರಾಲ್ - ಪುತ್ತೂರು, ಉದುಮ, ಪೈವಳಿಕೆ, ಬದಿಯಡ್ಕ, ಕೋಡೋ ಬೇಳೂರು, ಕುಂಬಳೆ, ಅಜನೂರು, ಮಂಜೇಶ್ವರ, ಪಳ್ಳಿಕೆರೆ, ಚೆಮ್ನಾಡ್ ಗ್ರಾಮ ಪಂಚಾಯತ್ ಹಾಗೂ ಕಾಸರಗೋಡು ಮತ್ತು ಕಾಸರಗೋಡು ನಗರಸಭಾ ವ್ಯಾಪ್ತಿ ಹಾಟ್ ಸ್ಪಾಟ್ ಗಳೆಂದು ಗುರುತಿಸಲಾಗಿದೆ.
ರೋಗಿಗಳ ಪ್ರಮಾಣ ಪ್ರತಿವಾರ ಅವಲೋಕಿಸಿ ಹಾಟ್ ಸ್ಪಾಟ್ ಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





