Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪ್ರಾಣಿ ಪ್ರಿಯರಿಂದ ಬೀದಿನಾಯಿಗಳಿಗೆ...

ಪ್ರಾಣಿ ಪ್ರಿಯರಿಂದ ಬೀದಿನಾಯಿಗಳಿಗೆ ಬಾಡೂಟ: ಪ್ರಾಣಿ ಸಂರಕ್ಷಕನಿಂದ ಆಹಾರ ಪೂರೈಕೆ

ಸತ್ಯಾ ಕೆ.ಸತ್ಯಾ ಕೆ.20 April 2020 1:42 PM IST
share
ಪ್ರಾಣಿ ಪ್ರಿಯರಿಂದ ಬೀದಿನಾಯಿಗಳಿಗೆ ಬಾಡೂಟ: ಪ್ರಾಣಿ ಸಂರಕ್ಷಕನಿಂದ ಆಹಾರ ಪೂರೈಕೆ

ಮಂಗಳೂರು, ಎ.20: ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳೂ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಬೀದಿನಾಯಿಗಳ ಬಗ್ಗೆ ಯುವಕರ ತಂಡ ಕಾಳಜಿ ವಹಿಸಿ ಬಾಡೂಟವನ್ನೇ ನೀಡುತ್ತಿರುವ ಮೂಲಕ ಗಮನ ಸೆಳೆಯುತ್ತಿದೆ.

ಇದೇ ವೇಳೆ ನಗರ ಹಾಗೂ ಸುತ್ತಮುತ್ತಲಿನ ಪ್ರಾಣಿಪ್ರಿಯರು ತಮ್ಮ ಸುತ್ತಮುತ್ತಲಿನ ನಿರಾಶ್ರಿತ ಪ್ರಾಣಿಗಳಿಗೆ ಸಿದ್ಧ ಆಹಾರ ಒದಗಿಸಲು ಸಾಧ್ಯವಾಗುವಂತೆ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುವ ವ್ಯಕ್ತಿಯೂ ನಮ್ಮ ನಗರದಲ್ಲಿದ್ದಾರೆ.

ವಿನ್ಯಾಸ್ ಶೆಟ್ಟಿ, ಕಿರಣ್ ರಾಜ್, ನಿಶಾಲ್ ಪೂಜಾರಿ, ಪವನ್, ಮೋಹನ್ ದಾಸ್ ಎಂಬ ಐವರು ಯುವಕರು ಕೆಲವು ದಿನಗಳಿಂದ ದಿನವೊಂದಕ್ಕೆ ಸುಮಾರು 15 ಕೆಜಿಯಷ್ಟು ಬಾಸ್ಮತಿ ಅಕ್ಕಿಯ ಅನ್ನ ಹಾಗೂ 10 ಕೆಜಿಯಷ್ಟು ಕೋಳಿ ಸಾರು ಮಾಡಿ ಸುಮಾರು 350ರಿಂದ 400ರಷ್ಟು ಬೀದಿ ನಾಯಿಗಳಿಗೆ ಬಾಡೂಟವನ್ನು ನೀಡುತ್ತಿದ್ದಾರೆ. ಇದರ ಜತೆಯಲ್ಲೇ ದಾರಿಯಲ್ಲಿ ಸಿಗುವ ದನ-ಕರುಗಳಿಗೂ ಇವರು ಗಂಜಿ ನೀರು ನೀಡಿ ಆರೈಕೆ ಮಾಡುತ್ತಿದ್ದಾರೆ.

ನಗರದ ತೊಕ್ಕೊಟ್ಟು, ಒಳಪೇಟೆ, ಪಿಲಾರ್, ಕೊಲ್ಯ, ಕೋಟೆಕಾರು, ಮಾಡೂರು, ಕೆ.ಸಿ.ರೋಡ್, ತಲಪಾಡಿ, ಉಚ್ಚಿಲ, ಸೋಮೇಶ್ವರ, ಉಳ್ಳಾಲ ಮೊದಲಾದ ಕಡೆ ಕಾರ್‌ನಲ್ಲಿ ಈ ತಂಡ ಆಹಾರವನ್ನು ಕೊಂಡೊಯ್ದು ಬೀದಿ ನಾಯಿಗಳಿಗೆ ನೀಡುತ್ತಿದೆ. ಇವರ ಕಾರು ಬಂತೆಂದರೆ ಸಾಕು ನಾಯಿಗಳು ಕೂಡಾ ಬಾಲ ಬೀಸುತ್ತಾ ಹಾಜರಾಗಿಬಿಡುತ್ತವೆ.

ಈ ಯುವಕರ ತಂಡದಲ್ಲಿ ಓರ್ವ ಫಿಟ್ನೆಸ್ ಟ್ರೈನರ್ ಆಗಿದ್ದರೆ, ಮತ್ತೋರ್ವ ಎಂಬಿಎ ವಿದ್ಯಾರ್ಥಿ, ಓರ್ವ ಖಾಸಗಿ ಹಣಕಾಸು ಸಂಸ್ಥೆಯ ಉದ್ಯೋಗಿ ಹಾಗೂ ಮತ್ತೋರ್ವ ಸಿವಿಲ್ ಕಾಂಟ್ರಾಕ್ಟರ್. ಪ್ರಾಣಿಗಳ ಮೇಲಿನ ಪ್ರೀತಿಯು ಈ ಯುವಕರಿಗೆ ಲಾಕ್‌ಡೌನ್‌ನ ಹಿನ್ನೆಲೆಯಲ್ಲಿ ಹಸಿದ ಬೀದಿ ಬದಿಯ ಪ್ರಾಣಿಗಳಿಗೆ ಆಹಾರ ನೀಡಲು ಪ್ರೇರಣೆ ನೀಡಿದೆ. ತೊಕ್ಕೊಟ್ಟು ಕಾಪಿಕಾಡ್ ಬಳಿಯ ಕಿರಣ್ ರಾಜ್‌ರವರ ಮನೆಯಲ್ಲಿ ಅವರ ತಾಯಿ ದಮಯಂತಿಯವರ ನೆರವಿನಲ್ಲಿ ಈ ಯುವಕರು ಸೇರಿ ಅನ್ನ, ಸಾರು ತಯಾರಿಸುತ್ತಾರೆ.

ಇದೇ ವೇಳೆ, ಬಿಜೈನ ತೌಸೀಫ್ ಅಹ್ಮದ್ ಎಂಬವರು ಕೆಳವು ದಿನಗಳಿಂದ ನಗರ ಹಾಗೂ ನಗರದ ಸುತ್ತಮುತ್ತಲಲ್ಲಿ ಪ್ರಾಣಿಗಳಿಗೆ ಸಿದ್ಧ ಆಹಾರ ನೀಡುವವರಿಗೆ ಅಕ್ಕಿ, ಹಿಂಡಿ, ಪೆಡಿಗ್ರೀಯಂತಹ ಆಹಾರ ವಸ್ತುಗಳನ್ನು ಅವರು ಪೂರೈಕೆ ಮಾಡುತ್ತಿದ್ದಾರೆ. ಕಳೆದ 10 ದಿನಗಳಲ್ಲಿ 680 ಕೆಜಿಯಷ್ಟು ಆಹಾರ ವಸ್ತುಗಳನ್ನು ಪೂರೈಕೆ ಮಾಡಿರುವ ತೌಸೀಫ್, ದಿನವೊಂದಕ್ಕೆ ಸರಾಸರಿ 30ರಿಂದ 40 ಕೆಜಿಯಷ್ಟು ಆಹಾರವನ್ನು ಬೇಡಿಕೆ ಸಲ್ಲಿಸಿದವರಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದ್ದಾರೆ.

ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ತೌಸೀಫ್ ಕಳೆದ ಹಲವಾರು ವರ್ಷಗಳಿಂದ ಪ್ರಾಣಿ ಸಂರಕ್ಷರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ತಮ್ಮ ಪ್ರದೇಶದ ಸುತ್ತಮುತ್ತಲಿನ ನಾಯಿ, ಬೆಕ್ಕು, ದನ ಕರು ಹಾಗೂ ಪಕ್ಷಿಗಳಿಗೆ ಆಹಾರ ನೀಡುವವರಿಗೆ ತಮ್ಮ ವಾಹನದ ಮೂಲಕ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಾರೆ.


‘‘ಗೋಶಾಲೆಗಳಿಗೂ ಬೇಡಿಕೆ ಬಂದಲ್ಲಿ ಆಹಾರವನ್ನು ಪೂರೈಸುತ್ತಿದ್ದೇನೆ. ಇಂದು ಕೂಡಾ ಸುಮಾರು 70 ಕೆಜಿಯಷ್ಟು ಆಹಾರ ಸಾಮಗ್ರಿ ಪೂರೈಕೆ ಮಾಡಲಾಗುತ್ತಿದೆ. ನಮ್ಮ ಮನೆ ಸಮೀಪದ ಅಂದರೆ, ಬಿಜೈ, ಜೈಲ್ ರೋಡ್, ಕೊಡಿಯಾಲ್‌ಗುತ್ತು ಬಳಿಯಲ್ಲಿರುವ ಸುಮಾರು 30ರಷ್ಟು ಶ್ವಾನಗಳಿಗೆ ನಾನು ದಿನನಿತ್ಯ ಪೆಡಿಗ್ರೀಯಂತಹ ಆಹಾರವನ್ನು ನೀಡುತ್ತಿದ್ದೇನೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆಯೂ ನಾವು ಕಾಳಜಿ ವಹಿಸಬೇಕಾಗುತ್ತದೆ’’.

* ತೌಸೀಫ್ ಅಹ್ಮದ್


‘‘ನಾವು ಅಪರಾಹ್ನ 3 ಗಂಟೆಯ ಹೊತ್ತಿಗೆ ಪ್ರಾಣಿಗಳಿಗೆ ಆಹಾರ ಹಾಕಲು ಆರಂಭಿಸುತ್ತೇವೆ. ತೊಕ್ಕೊಟ್ಟಿನಿಂದ ಆರಂಭಿಸಿ ತಲಪಾಡಿವರೆಗೆ, ಅಲ್ಲಿಂದ ಉಚ್ಚಿಲ, ಸೋಮೇಶ್ವರ, ಉಳ್ಳಾಲ, ಪಿಲಾರ್, ಮಾಡೂರು, ದೇರಳಕಟ್ಟೆ ಹೀಗೆ ಬೀದಿ ಬದಿಯಲ್ಲಿ ಸಿಗುವ ನಾಯಿಗಳು, ಬೆಕ್ಕಿಗೆ ಚಿಕನ್ ಕರಿ ಹಾಗೂ ಅನ್ನ ನೀಡಿದರೆ, ದನಕರುಗಳಿಗೆ ಗಂಜಿ ನೀರು ಕೊಡುತ್ತೇವೆ. ಸಂಜೆ 7ರಿಂದ 8ರವರೆಗೆ ನಮ್ಮ ಈ ಕಾರ್ಯ ಸಾಗುತ್ತದೆ. ನಮ್ಮ ಸ್ನೇಹಿತರೆಲ್ಲಾ ಸೇರಿ ಹಣ ಸಂಗ್ರಹಿಸಿ ಈ ಕಾರ್ಯವನ್ನು ಮಾಡುತ್ತಿದ್ದೇವೆ’’.

-ವಿನ್ಯಾಸ್ ಶೆಟ್ಟಿ

share
ಸತ್ಯಾ ಕೆ.
ಸತ್ಯಾ ಕೆ.
Next Story
X