ಆರೋಗ್ಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ: ಪಿಎಫ್‍ಐ ಖಂಡನೆ
ಬೆಂಗಳೂರು, ಎ.20: ಪಾದರಾಯನಪುರದಲ್ಲಿ ಆರೋಗ್ಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷಾ ಖಂಡಿಸಿದ್ದಾರೆ.
ಸೋಮವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಯಾರಿ ಇಲ್ಲದ ಲಾಕ್‍ಡೌನ್ ಕ್ರಮವು ಈಗಾಗಲೇ ಬಹಳಷ್ಟು ವಿವಾದಗಳಿಗೆ ಕಾರಣವಾಗಿದೆ. ಜನಜೀವನವನ್ನು ಅತಂತ್ರ ಸ್ಥಿತಿಗೆ ದೂಡಿದೆ. ಮಾತ್ರವಲ್ಲ ಇದು ಜನಸಾಮಾನ್ಯರಲ್ಲಿ ತೀವ್ರ ಹತಾಶೆಯನ್ನು ಮೂಡಿಸಿದೆ ಎಂದು ತಿಳಿಸಿದ್ದಾರೆ.
ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್‍ಗೆ ಒಳಪಡಿಸುವ ಕುರಿತು ಬಿಬಿಎಂಪಿ ಯೋಜಿಸಿತ್ತು, ಆದರೆ, ಪಾದರಾಯನಪುರ ವಾರ್ಡ್‍ನಲ್ಲಿ ಶ್ರಮಿಕ ವರ್ಗವು ಅಧಿಕ ಸಂಖ್ಯೆಯಲ್ಲಿದ್ದು, ಇವರು ಜೀವನೋಪಾಯಕ್ಕಾಗಿ ದಿನಗೂಲಿಯನ್ನೇ ಆಶ್ರಯಿಸಿದ್ದಾರೆ. ಅದೇ ರೀತಿ ಈ ವರ್ಗದಲ್ಲಿ ಕ್ವಾರಂಟೈನ್ ಕುರಿತ ಅರಿವು ಕೂಡ ಕಡಿಮೆ ಇದೆ. ಹೀಗಾಗಿ, ಜಾಗೃತಿ ಮೂಡಿಸುವುದು ಕರ್ತವ್ಯ ಆಗಿದೆ ಎಂದು ಅವರು ತಿಳಿಸಿದ್ದಾರೆ.
Next Story





