ಜಪಾನ್: ಪೆಸಿಫಿಕ್ ಸಾಗರದಲ್ಲಿ ಪ್ರಬಲ ಭೂಕಂಪ
ಟೋಕಿಯೊ (ಜಪಾನ್), ಎ. 20: ಜಪಾನ್‌ನ ಪೂರ್ವ ಕರಾವಳಿಯಲ್ಲಿ ಸೋಮವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 6.4ರ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಆದರೆ, ಸುನಾಮಿ ಎಚ್ಚರಿಕೆಯನ್ನು ಹೊರಡಿಸಲಾಗಿಲ್ಲ.
ಭೂಕಂಪದ ಕೇಂದ್ರಬಿಂದು ಮಿಯಾಗಿ ರಾಜ್ಯದ ಕರಾವಳಿಯಿಂದ 50 ಕಿ.ಮೀ. ದೂರದ ಪೆಸಿಫಿಕ್ ಸಮುದ್ರದ ತಳದಿಂದ 41.7 ಕಿ.ಮೀ. ಆಳದಲ್ಲಿತ್ತು ಎಂದು ಯುಎಸ್ ಜಿಯಾಲಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.
ಮುಂಜಾನೆ 5.30ರ ಸುಮಾರಿಗೆ ಭೂಕಂಪ ಸಂಭವಿಸಿತು ಎಂದು ಜಪಾನ್‌ನ ಕ್ಯೋಡೊ ಸುದ್ದಿ ಸಂಸ್ಥೆ ತಿಳಿಸಿದೆ.
Next Story





