ಸಾಧುಗಳ ಹತ್ಯೆ ಪ್ರಕರಣ: ‘ದಾಳಿಕೋರರು, ಸಂತ್ರಸ್ತರು ಬೇರೆ ಬೇರೆ ಧರ್ಮದವರಲ್ಲ’; ಮಹಾರಾಷ್ಟ್ರ ಗೃಹ ಸಚಿವ

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಎಂಬಲ್ಲಿ ಇಬ್ಬರು ಸಾಧುಗಳು ಸೇರಿದಂತೆ ಮೂವರು ವ್ಯಕ್ತಿಗಳನ್ನು ಥಳಿಸಿ ಕೊಂದ ಘಟನೆಗೆ ಕೆಲ ಸಂಘಟನೆಗಳು ಕೋಮು ಬಣ್ಣ ಹಚ್ಚಲು ನಡೆಸುತ್ತಿರುವ ಯತ್ನದ ನಡುವೆಯೇ ಪ್ರತಿಕ್ರಿಯಿಸಿರುವ ರಾಜ್ಯದ ಗೃಹ ಸಚಿವ ಅನಿಲ್ ದೇಶಮುಖ್, “ಈ ಘಟನೆ ಮತೀಯವಲ್ಲ, ದಾಳಿ ನಡೆಸಿದವರು ಹಾಗೂ ದಾಳಿಗೊಳಗಾದವರು ಬೇರೆ ಬೇರೆ ಧರ್ಮಗಳವರಲ್ಲ. ಸಮಾಜದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ” ಎಂದಿದ್ದಾರೆ.
ಮುಂಬೈನಿಂದ ಸೂರತ್ ಗೆ ತೆರಳುತ್ತಿದ್ದ ಮೂವರನ್ನು ಕಳ್ಳರೆಂದು ಶಂಕಿಸಿ ಕಾರಿನಿಂದ ಹೊರಗೆಳೆದು ಥಳಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ 101 ಮಂದಿಯನ್ನು ಬಂಧಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಬಂಧಿತರಲ್ಲಿ ಒಂಬತ್ತು ಮಂದಿ ಅಪ್ರಾಪ್ತರೆಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, “ನಾವು ಘಟನೆಗೆ ಸಂಬಂಧಿಸಿ ಈಗಾಗಲೇ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿದ್ದೇವೆ. 100 ಮಂದಿಯನ್ನು ಬಂಧಿಸಲಾಗಿದೆ. ಈ ಇಡೀ ಪ್ರಕರಣದಲ್ಲಿ ಕೋಮುವಾದ ಇಲ್ಲ. ಈ ಬಗ್ಗೆ ನಾನು ಗೃಹಸಚಿವ ಅಮಿತ್ ಶಾ ಅವರ ಜೊತೆ ಮಾತನಾಡಿದ್ದೇನೆ” ಎಂದರು.
हमला करनेवाले और जिनकी इस हमले में जान गई - दोनों अलग धर्मीय नहीं हैं।
— ANIL DESHMUKH (@AnilDeshmukhNCP) April 19, 2020
बेवजह समाज में/ समाज माध्यमों द्वारा धार्मिक विवाद निर्माण करनेवालों पर पुलिस और @MahaCyber1 को कठोर कार्रवाई करने के आदेश दिए गए हैं।#LawAndOrderAboveAll







