ರಮಝಾನ್ ಕಿಟ್ ವಿತರಣೆ : ಅಮ್ಮೆಂಬಳ ಹೆಲ್ಪ್ ಲೈನ್ ಸಂಚಾಲಕರ ಏಕಾಂಗಿ ಸೇವೆ

ಉಬೈದುಲ್ಲಾ
ಮಂಗಳೂರು, ಎ.20: ಕೊರೋನದಿಂದ ತತ್ತರಿಸಿರುವ ಜನತೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಂಗಳೂರು ತಾಲೂಕಿನ ಬೋಳಿಯಾರ್ ಗ್ರಾಮದ ಅಮ್ಮೆಂಬಳದ ಜುಮಾ ಮಸ್ಜಿದ್ ಅಧ್ಯಕ್ಷ, ಅಮ್ಮೆಂಬಳ ಹೆಲ್ಪ್ ಲೈನ್ ನ ಸಂಚಾಲಕ ಬಿ. ಉಬೈದುಲ್ಲಾ ಅಮ್ಮೆಂಬಳ ಜಮಾಅತ್ನ ಉತ್ಸಾಹಿ ಯುವಕರ ಸಹಕಾರದಿಂದ 53 ಮನೆಗಳಿಗೆ ತಲಾ 4,250 ರೂ. ಮೊತ್ತದ (ಒಟ್ಟು 2.25 ಲಕ್ಷ ರೂ.) ದಿನಬಳಕೆಯ ಆಹಾರ ಪದಾರ್ಥ ಗಳನ್ನು ಒಳಗೊಂಡ ರಮಝಾನ್ ಕಿಟ್ ವಿತರಿಸಿ ಏಕಾಂಗಿ ಸೇವೆಯ ಮೂಲಕ ಗಮನ ಸೆಳೆದರು.
ಜಮಾಅತ್ನ ಎಲ್ಲಾ ಮನೆಗಳಿಗಲ್ಲದೆ ಮಸೀದಿಯ ಉಸ್ತಾದರಿಗೆ ಕೂಡ ಕಿಟ್ ವಿತರಿಸಿದರು.
Next Story





