ಪಾದರಾಯನಪುರ : ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ- ಯುನಿವೆಫ್ ಕರ್ನಾಟಕ
ಮಂಗಳೂರು : ಪಾದರಾಯನಪುರ ಘಟನೆ ನಿಜವಾಗಿಯೂ ಖಂಡನೀಯ. ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಯುನಿವೆಫ್ ಕರ್ನಾಟಕ ಅದನ್ನು ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರನ್ನು ಕಾನೂನಾತ್ಮಕ ರೀತಿಯಲ್ಲಿ ಶಿಕ್ಷಿಸಬೇಕು ಎಂದು ತಿಳಿಸಿದೆ.
ಘಟನೆಯನ್ನು ಒಂದು ಸಮುದಾಯದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿರುವುದು ಮತ್ತು ಒಂದು ಸಮುದಾಯವನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸುವುದನ್ನು ಕೂಡ ಯುನಿವೆಫ್ ಕರ್ನಾಟಕ ಖಂಡಿಸುತ್ತದೆ. ಯಾವುದೇ ಘಟನೆ ಸಂಭವಿಸಿದಾಗ ಘಟನೆಯಲ್ಲಿ ಭಾಗಿದಾರರನ್ನು ಧರ್ಮ ಮತ್ತು ಜಾತಿಯಾಧಾರಿತ ನೋಡಬಾರದು. ಇದು ಸಮಸ್ಯೆಗಳನ್ನು ಕೋಮುವಾದೀರಣ ಗೊಳ್ಳುತ್ತದೆ ಮತ್ತು ಇತರರಿಗೆ ಪ್ರಚೋದನೆ ನೀಡುತ್ತದೆ. ಈ ಸಂದರ್ಭದಲ್ಲಿ ಮಾಧ್ಯಮವು ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಮಾಧ್ಯಮದವರು ಅದನ್ನು ಕಲ್ಮಶ ಗೊಳಿಸುವುದನ್ನು ಯುನಿವೆಫ್ ಕರ್ನಾಟಕ ಖಂಡಿಸುತ್ತದೆ ಯುನಿವೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ತಿಳಿಸಿದ್ದಾರೆ.
Next Story





