ಯಂಗ್ ಬ್ರಿಗೇಡ್ ಪುತ್ತೂರು ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಪುತ್ತೂರು: ನೆಲ್ಲಿಕಟ್ಟೆ ಸರ್ಕಾರಿ ಶಾಲಾ ವಠಾರದಲ್ಲಿ ಯಂಗ್ ಬ್ರಿಗೇಡ್ ವತಿಯಿಂದ ಪುತ್ತೂರು ಆಶಾ ಕಾರ್ಯಕರ್ತೆ ಯರಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಪುತ್ತೂರು ಶಾಸಕರಾದ ಸಂಜೀವ ಮಠಂದೂರು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಂಗ್ ಬ್ರಿಗೇಡ್ ಕಾರ್ಯವನ್ನು ಶ್ಲಾಘಿಸಿದರು. ಯಂಗ್ ಬ್ರಿಗೇಡ್ ಪಧಾದಿಕಾರಿಗಳ ಪರವಾಗಿ ಯಂಗ್ ಬ್ರಿಗೇಡ್ ಸೇವಾದಳ ರಾಜ್ಯಧ್ಯಕ್ಷರಾದ ಜುನೈದ್ ಪಿ.ಕೆ. ಕಿಟ್ ವಿತರಿಸಿದರು.
ಈ ಸಂದರ್ಭ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಕೃಷ್ಣ ಬೋರ್ಕರ್, ತಾಲ್ಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಕೃಷ್ಣ ಆಲ್ವ, ಪುತ್ತೂರು ಆರೋಗ್ಯಧಿಕಾರಿ ಅಶೋಕ್ ಕುಮಾರ್ ರೈ, ಸರ್ಕಾರಿ ವೈದ್ಯರಾದ ಡಾ. ದೀಪಕ್ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಯಂಗ್ ಬ್ರಿಗೇಡ್ ನಾಯಕರಾದ ಪ್ರಕಾಶ್ ಪಿ.ಕೆ, ಸಲೀಂ ಪಾಪು, ವೈಶಾಕ್ ಭಟ್, ಲೋಕೇಶ್ ಪಡ್ಡಯೂರು, ವಿಶಾಂಕ್ ಭಟ್, ರಶೀದ್ ಮುರ, ಮೋನು ಬಪ್ಪಳಿಗೆ, ಶರೀಫ್ ಬಲ್ನಾಡು, ಪುತ್ತೂರು ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರಾ, ವಿಟ್ಲ, ಉಪ್ಪಿನಂಗಡಿ ಅಧ್ಯಕ್ಷರಾದ ಅಭಿಷೇಕ್ ಬೆಳ್ಳಿಪ್ಪಾಡಿ, ನಗರ ಸಭಾ ಸದಸ್ಯರಾದ ರಿಯಾಝ್ ಗೋಳಿಕಟ್ಟೆ ಸಹಕರಿಸಿದರು.






.jpeg)



