ಉಡುಪಿ : 5 ಲೀಟರ್ ಕಳ್ಳಭಟ್ಟಿ ಸಹಿತ ಆರೋಪಿ ಸೆರೆ
ಉಡುಪಿ : ತಾಲೂಕಿನ ಶಿವಳ್ಳಿ ಗ್ರಾಮದ ಜೋಸೆಫ್ ಮಸ್ಕರೇನಸ್ ಎಂಬಾತನ ಮನೆಯಲ್ಲಿ 5 ಲೀಟರ್ ಕಳ್ಳಭಟ್ಟಿಯನ್ನು ಅಬಕಾರಿ ಜಂಟಿ ಆಯುಕ್ತರು ಮಂಗಳೂರು ಅವರ ಆದೇಶದಂತೆ ಉಡುಪಿ ಅಬಕಾರಿ ಉಪ ಆಯುಕ್ತರಾದ ನಾಗೇಶ ಕುಮಾರ್ ಇವರ ನಿರ್ದೇಶನದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಈ ದಾಳಿಯಲ್ಲಿ ಅಬಕಾರಿ ಇನ್ಸ್ ಪೆಕ್ಟರ್ ಶುಭದಾ ಸಿ ನಾಯಕ್ ಹಾಗೂ ಸಿಬ್ಬಂದಿಗಳಾದ ಕೃಷ್ಣ, ದಿವಾಕರ, ದಿನೇಶ್ ಭಾಗವಹಿಸಿದ್ದರು.
Next Story





