ಸಿಪಿಎಂ - ಸಿಐಟಿಯು ರಾಷ್ಟ್ರವ್ಯಾಪಿ ಚಳುವಳಿಗೆ ಮನೆಯಿಂದಲೇ ಭಾಗಿ
ಮಂಗಳೂರು, ಎ.21: ‘ಭಾಷಣ ಸಾಕು-ವೇತನ ಬೇಕು, ಆಹಾರ ಒದಗಿಸಿರಿ- ಬದುಕು ಉಳಿಸಿರಿ’ ಎಂಬ ಘೋಷಣೆಯೊಂದಿಗೆ ಸಿಪಿಎಂ ಮತ್ತು ಸಿಐಟಿಯು ಕರೆಯಂತೆ ರಾಷ್ಟ್ರವ್ಯಾಪಿ ಮನೆಯಿಂದಲೇ ಚಳುವಳಿ ಕಾರ್ಯಕ್ರಮಕ್ಕೆ ದ.ಕ.ಜಿಲ್ಲೆಯ ವಿವಿಧೆಡೆ ಸಿಪಿಎಂ ಮತ್ತು ಸಿಐಟಿಯು ನಾಯಕರು ತಮ್ಮ ಮನೆಯ ಮುಂದೆ ನಿಂತು ಪೋಸ್ಟರ್ ಪ್ರದರ್ಶಿಸುವ ಮೂಲಕ ಭಾಗಿಯಾದರು.
ಸಿಐಟಿಯು ಮುಖಂಡರಾದ ವಸಂತ ಆಚಾರಿ, ಸುನೀಲ್ ಕುಮಾರ್ ಬಜಾಲ್ ಮತ್ತಿತರು ಮನೆ ಮುಂದೆ ನಿಂತು ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸುವ ಪ್ರಯತ್ನ ನಿಲ್ಲಿಸಿ, ಎಲ್ಲ ವಲಸೆ ಕಾರ್ಮಿಕರಿಗೆ ತಕ್ಷಣ ಆಹಾರ ಮತ್ತು ವಸತಿ ಕೊಡಿ, ಗೊಡೌನಿನಲ್ಲಿರುವ 7.5 ಕೋಟಿ ಟನ್ ಆಹಾರಧಾನ್ಯ ಬಳಸಿ ಬಿಪಿಎಲ್/ಎಪಿಎಲ್ ಮತ್ತು ವಲಸೆ ಕಾರ್ಮಿಕರಿಗೆ ಎರಡು ತಿಂಗಳ ಉಚಿತ ರೇಶನ್ ಕೊಡಿ, ಮುಂಚೂಣಿಯ ಆರೋಗ್ಯ ಮತ್ತು ಆವಶ್ಯಕ ಸೇವಾ ಸಿಬ್ಬಂದಿಗೆ ರಕ್ಷಣಾ ಕವಚ/ಉಪಕರಣಗಳನ್ನು ಕೊಡಿ ಎಂದು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
Next Story





