‘ಕೋವಿಡ್ ವಾರಿಯರ್’ ಗೌರವ ಪಡೆದ ಪೊಲೀಸರ ಕುಟುಂಬದ ಜೊತೆ ಸಂವಾದ
ಮಂಗಳೂರು, ಎ.21: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೋವಿಡ್ ವಾರಿಯರ್ ಗೌರವ ಪಡೆದ ಪೊಲೀಸ್ ಸಿಬ್ಬಂದಿಯ ಕುಟುಂಬದ ಜತೆ ಪೊಲೀಸ್ ಕಮಿಷರ್ ಡಾ.ಪಿ.ಎಸ್. ಹರ್ಷಾ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೋವಿಡ್-19 ಜಾಗೃತಿ ಹಿನ್ನೆಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ಕೋವಿಡ್ ವಾರಿಯಸ್ ಎಂದು ಗುರುತಿಸಿ ಗೌರವಿಸಲಾಗುತ್ತಿದೆ. ಈ ಸಿಬ್ಬಂದಿಯ ಕುಟುಂಬ ಜತೆ ವಿಡಿಯೋ ಕಾನ್ಸರೆನ್ಸ್ ಮೂಲಕ ಮಾತನಾಡಿದ ಕಮಿಷನರ್ ವಾರಿಯರ್‌ಗಳ ಕರ್ತವ್ಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಲ್ಲದೆ, ಕುಟುಂಬಕ್ಕೆ ಧೈರ್ಯ ತುಂಬಿದರು.
ಈ ಸಂದರ್ಭ ಕೋವಿಡ್ ವಾರಿಯರ್ ಗೌರವ ಪಡೆದ ಸಂತೋಷ್, ನಯನಾ, ಗೋವಿಂದಾ, ಬಸವರಾಜ್ ಪಾಟೀಲ್, ಶಿವಪ್ಪ, ರಂಜನ್ ಕುಮಾರ್, ಸೋಮನಗೌಡ ಚೌಧರಿ, ಪುನೀತ್ ಉಪಸ್ಥಿತರಿದ್ದರು
Next Story





