ರಸ್ತೆ ಅಪಘಾತ: ಇಬ್ಬರಿಗೆ ಗಾಯ
ಮಂಗಳೂರು, ಎ.21: ನಗರ ಹೊರವಲಯದ ಕೈಕಂಬದ ಸಮೀಪದ ಕಲ್ಪನೆಯಲ್ಲಿ ಮಂಗಳವಾರ ಎರಡು ಸ್ಕೂಟರ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸವಾರರು ಗಾಯಗೊಂಡಿದ್ದಾರೆ.
ಸ್ಥಳೀಯ ನಿವಾಸಿಗಳಾದ ಯತೀಶ್ (23) ಹಾಗೂ ಪ್ಯಾಟ್ರಿಕ್ (56) ಗಾಯಗೊಂಡವರು. ಅವಶ್ಯ ಸಾಮಗ್ರಿ ಖರೀದಿಸಲು ಪೇಟೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಕದ್ರಿ ಸಂಚಾರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





