ಲಾಕ್‍ಡೌನ್ ನಿಯಮ ಉಲ್ಲಂಘನೆ : ಬನ್ನೂರಿನ 5 ಮಂದಿ ವಿರುದ್ಧ ಪ್ರಕರಣ ದಾಖಲು
ಪುತ್ತೂರು : ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಂಬಂಧ ಭಾರತ ದೇಶದಾದ್ಯಂತ ಲಾಕ್ ಡೌನ್ ಅದೇಶ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿದ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ನಗರದ ಹೊರವಲಯದ ಬನ್ನೂರು ಕರ್ಮಲ ಎಂಬಲ್ಲಿನ 5 ಮಂದಿ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬನ್ನೂರು ಕಮರ್ಲ ನಿವಾಸಿ ಸೈಫುದ್ದೀನ್ (30), ಬನ್ನೂರು ಜೈನರಗುರಿ ನಿವಾಸಿ ಮೊಹಮ್ಮದ್ ಅತ್ತಾವುಲ್ಲಾ(26), ಕರ್ಮಲ ನಿವಾಸಿ ನಂದಕುಮಾರ್(20) ಮತ್ತು ಮೋಹನ್(53), ಬನ್ನೂರು ಕರ್ಮಲ ಕುಮೇರಡ್ಕ ನಿವಾಸಿ ಧನಂಜಯ(23) ಎಂಬವರ ವಿರುದ್ಧ ಲಾಕ್‍ಡೌನ್ ನಿಯಮ ಉಲ್ಲಂಘನೆ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.
Next Story





