ಭವಿಷ್ಯದಲ್ಲಿ ಕೊರೋನ ಔಷಧಿಗಳ ನ್ಯಾಯೋಚಿತ ಪಾಲು ಬೇಕು: ವಿಶ್ವಸಂಸ್ಥೆ ಸದಸ್ಯ ದೇಶಗಳ ಒತ್ತಾಯ

ವಿಶ್ವಸಂಸ್ಥೆ (ನ್ಯೂಯಾರ್ಕ್), ಎ. 21: ಕೊರೋನವೈರಸ್‌ಗೆ ಭವಿಷ್ಯದಲ್ಲಿ ಲಸಿಕೆಗಳು ತಯಾರಾದರೆ, ‘ಎಲ್ಲರಿಗೂ ಸರಿಯಾದ ಪ್ರಮಾಣದಲ್ಲಿ ಹಾಗೂ ಸರಿಯಾದ ಸಮಯದಲ್ಲಿ’ ಅವುಗಳ ವಿತರಣೆಯಾಗಬೇಕು ಎಂದು ಕರೆನೀಡುವ ನಿರ್ಣಯವೊಂದನ್ನು 193 ಸದಸ್ಯ ದೇಶಗಳನ್ನೊಳಗೊಂಡ ವಿಶ್ವಸಂಸ್ಥೆಯ ಮಹಾಧಿವೇಶನವು ಸೋಮವಾರ ಸರ್ವಾನುಮತದಿಂದ ಅಂಗೀಕರಿಸಿದೆ.
ಕೋವಿಡ್-19ನ್ನು ಎದುರಿಸಲು ಅಗತ್ಯವಾದ ವೈಜ್ಞಾನಿಕ ಅಂತರ್‌ರಾಷ್ಟ್ರೀಯ ಸಹಕಾರ ಮತ್ತು ಸಮನ್ವಯ ವರ್ಧನೆಗೂ ನಿರ್ಣಯ ಕರೆ ನೀಡಿದೆ. ಮೆಕ್ಸಿಕೊ ರೂಪಿಸಿದ ನಿರ್ಣಯಕ್ಕೆ ಅಮೆರಿಕ ಬೆಂಬಲ ನೀಡಿದೆ.
ಮಹಾ ಸಾಂಕ್ರಾಮಿಕವನ್ನು ಹತ್ತಿಕ್ಕಲು ಅಗತ್ಯವಾದ ಲಸಿಕೆ ಮತ್ತು ಇತರ ಔಷಧಿಗಳನ್ನು ಅಭಿವೃದ್ಧಿಪಡಿಸಲು ಜಗತ್ತಿನಾದ್ಯಂತ ಪ್ರಯೋಗಾಲಯಗಳು ಮತ್ತು ಔಷಧ ತಯಾರಿಕಾ ಕಂಪೆನಿಗಳು ಪ್ರಯತ್ನಗಳನ್ನು ನಡೆಸುತ್ತಿರುವಂತೆಯೇ, ದೇಶಗಳು ಸಹಕಾರಕ್ಕೆ ಕರೆ ನೀಡಿವೆ.
Next Story





