ತೀವ್ರ ಹಸಿದವರ ಸಂಖ್ಯೆ ಈ ವರ್ಷ ದ್ವಿಗುಣ: ವಿಶ್ವಸಂಸ್ಥೆ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಎ. 21: ಆಹಾರದ ತೀವ್ರ ಅಭದ್ರತೆಯನ್ನು ಎದುರಿಸುತ್ತಿರುವವರ ಸಂಖ್ಯೆ, ಕೋವಿಡ್-19 ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಹಿನ್ನಡೆಯಿಂದಾಗಿ ಈ ವರ್ಷ ದ್ವಿಗುಣಗೊಂಡು 26.5 ಕೋಟಿಗೆ ಏರಬಹುದು ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಪಿಎಫ್) ಮಂಗಳವಾರ ತಿಳಿಸಿದೆ.
ಕೊರೋನ ವೈರಸ್ ಸಾಂಕ್ರಾಮಿಕದ ಹರಡುವಿಕೆಯನ್ನು ನಿಯಂತ್ರಿಸಲು ಹೇರಲಾಗಿರುವ ಚಲನವಲನ ನಿರ್ಬಂಧದಿಂದಾಗಿ ಸುಮಾರು 13 ಕೋಟಿ ಮಂದಿ ತೀವ್ರ ಹಸಿವೆಗೆ ಗುರಿಯಾಗಲಿದ್ದಾರೆ ಎಂದು ಎಂದು ಡಬ್ಲ್ಯುಪಿಎಫ್ ಅಂದಾಜಿಸಿದೆ. ಈಗಾಗಲೇ 13.5 ಕೋಟಿ ಮಂದಿ ತೀವ್ರ ಹಸಿವೆಯಿಂದ ಬಳಲುತ್ತಿದ್ದಾರೆ.
Next Story





