Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕೊರೋನ ವಿರುದ್ಧ ಮಾದರಿ ಹೋರಾಟ

ಕೊರೋನ ವಿರುದ್ಧ ಮಾದರಿ ಹೋರಾಟ

ವಾರ್ತಾಭಾರತಿವಾರ್ತಾಭಾರತಿ21 April 2020 11:06 PM IST
share
ಕೊರೋನ ವಿರುದ್ಧ ಮಾದರಿ ಹೋರಾಟ

ಕೊರೋನ ವೈರಾಣು ವಿರುದ್ಧ ಇಡೀ ವಿಶ್ವವೇ ಸಮರ ಸಾರಿದೆ. ಆದರೂ ಈ ಮಾರಕ ಪಿಡುಗನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಾಗಿಲ್ಲ.ಭಾರತದಲ್ಲಿ ಕೊರೋನ ವೈರಾಣು ಮೊದಲು ಗೋಚರಿಸಿದ್ದು ಕೇರಳದಲ್ಲಿ.ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ಕಳೆದ ಜನವರಿ 30 ರಂದು ಕೇರಳಕ್ಕೆ ವಾಪಸ್ ಬಂದಾಗ ಈ ಮಾರಕ ವೈರಸ್ ಅವರಲ್ಲಿ ಪತ್ತೆಯಾಗಿತ್ತು. ಆನಂತರ ಕೇರಳದಲ್ಲಿ ಕೊರೋನ ವ್ಯಾಪಕವಾಗಿ ಹಬ್ಬಿತು. ಆದರೆ ಈಗ ಕೇರಳದಲ್ಲಿ ಬಹುತೇಕ ಕೊರೋನ ನಿಯಂತ್ರಣಕ್ಕೆ ಬಂದಿದೆ. ಅಂತಲೇ ಎಲ್ಲರೂ ಕೇರಳ ಮಾದರಿಯನ್ನು ಅನುಸರಿಸುವ ಮಾತನ್ನು ಆಡುತ್ತಿದ್ದಾರೆ.ಕರ್ನಾಟಕ ಸರಕಾರ ಕೂಡ ಕೇರಳ ಮಾದರಿಯಂತೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿದೆ.

 ಹಾಗೆ ನೋಡಿದರೆ ವಿದೇಶದಲ್ಲಿ ನೆಲೆಸಿದ ಕೇರಳಿಗರ ಸಂಖ್ಯೆ ಉಳಿದ ರಾಜ್ಯಗಳಿಗಿಂತ ಹೆಚ್ಚಾಗಿದೆ.ಅದರಲ್ಲೂ ಕೊಲ್ಲಿ ರಾಷ್ಟ್ರಗಳಲ್ಲಿ ಬಹುಸಂಖ್ಯೆಯಲ್ಲಿ ಕೇರಳದವರು ನೆಲೆಸಿದ್ದಾರೆ. ಹೀಗೆ ವಿದೇಶದಲ್ಲಿ ನೆಲೆಸಿರುವ ಕೇರಳಿಗರು ಆಗಾಗ ತಮ್ಮ ರಾಜ್ಯಕ್ಕೆ ಬಂದು ಹೋಗುತ್ತಿರುತ್ತಾರೆ. ಕೇರಳದ ನಾಲ್ಕು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಕೇರಳಿಗರು ಬಂದಿಳಿದಿದ್ದಾರೆ. ಹೀಗಾಗಿ ಆ ರಾಜ್ಯದಲ್ಲಿ ಕೊರೋನ ಸೋಂಕು ಪ್ರಕರಣಗಳು ಒಮ್ಮೆಲೇ ಜಾಸ್ತಿಯಾದವು. ಅದರಂತೆ ಮಹಾರಾಷ್ಟ್ರ, ದಿಲ್ಲಿ, ಮುಂತಾದ ಕಡೆಯೂ ಒಮ್ಮೆಲೇ ಕೊರೋನ ಸೋಂಕು ಪ್ರಕರಣಗಳು ಹೆಚ್ಚಾದವು.ಉಳಿದೆಲ್ಲ ರಾಜ್ಯಗಳು ಕೊರೋನ ಹೊಡೆತದಿಂದ ತತ್ತರಿಸಿ ಹೋಗಿವೆ. ಆದರೆ ಈ ಮಾರಕ ವೈರಾಣು ವಿರುದ್ಧ ಅವಿರತವಾಗಿ ಸೆಣಸಿದ ಕೇರಳ ಈಗ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಕೇರಳದ ಈ ಗೆಲುವಿನ ಶ್ರೇಯಸ್ಸು ಅಲ್ಲಿನ ಪಿಣರಾಯಿ ವಿಜಯನ್ ನೇತೃತ್ವದ ಸರಕಾರಕ್ಕೆ ಸಲ್ಲಬೇಕು. ಕೊರೋನ ಸೋಂಕಿನ ಅಪಾಯವನ್ನು ಮೊದಲೇ ಅರಿತು ಅದು ಹರಡದಂತೆ ತಡೆ ಹಿಡಿಯುವಲ್ಲಿ ಅಲ್ಲಿನ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಇಡೀ ದೇಶವೇ ಕೊಂಡಾಡುತ್ತಿದೆ. ಆರಂಭದಲ್ಲಿ ಕೊರೋನ ಸೋಂಕು ಪೀಡಿತ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡ ಕೇರಳ ಈಗ ಹತ್ತನೇ ಸ್ಥಾನಕ್ಕೆ ಇಳಿದು ಇಡೀ ದೇಶದ ಮಾತ್ರವಲ್ಲ ಜಗತ್ತಿನ ಗಮನವನ್ನು ಸೆಳೆದಿದೆ. ಕಳೆದ ಮಾರ್ಚ್ 9ರಿಂದ 20ರ ಕಾಲಾವಧಿಯಲ್ಲಿ ಕೊರೋನ ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ.84 ರಷ್ಟಿದೆ.ಇದು ಇಡೀ ದೇಶದಲ್ಲೇ ಅತ್ಯಧಿಕ ಪ್ರಮಾಣ ಎಂದು ಹೇಳಲಾಗುತ್ತಿದೆ.

ಹಾಗೆ ನೋಡಿದರೆ ಕೇಂದ್ರ ಸರಕಾರ ಕೂಡ ಕೊರೋನ ಅಪಾಯದ ಬಗ್ಗೆ ಎಚ್ಚರವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿತು.ಕೊರೋನ ಕಾಣಿಸಿಕೊಂಡ ಜನವರಿಯಲ್ಲೇ ಎಚ್ಚರ ವಹಿಸಿದ್ದರೆ ಈಗ ದೇಶವ್ಯಾಪಿ ‘ಲಾಕ್‌ಡೌನ್’ ಪ್ರಸಂಗ ಬರುತ್ತಿರಲಿಲ್ಲ. ಆದರೆ ಪುಟ್ಟ ರಾಜ್ಯ ಕೇರಳ ಆಗಲೇ ಎಚ್ಚರ ವಹಿಸಿತು. ಒಂದು ಸರಕಾರಕ್ಕೆ ಅದರಲ್ಲೂ ಆರೋಗ್ಯ ಇಲಾಖೆಗೆ ದೂರ ದೃಷ್ಟಿ ಇದ್ದರೆ ಎಂತಹ ಮಾರಕ ಕಾಯಿಲೆಯನ್ನಾದರೂ ಹಿಮ್ಮೆಟ್ಟಿಸಬಹುದು ಎಂಬುದಕ್ಕೆ ಕೇರಳ ಉದಾಹರಣೆಯಾಗಿದೆ.

ಈ ನಡುವೆ ಇಟಲಿಯಿಂದ ಬಂದ ಮೂವರು ಸದಸ್ಯರ ಕುಟುಂಬ ತನ್ನ ಪ್ರಯಾಣದ ಮಾಹಿತಿಯನ್ನು ಬಚ್ಚಿಟ್ಟು ಸಂಬಂಧಿಕರ ಮನೆಗಳು ಹಾಗೂ ಕೆಲ ಊರುಗಳಿಗೆ ಭೇಟಿ ನೀಡಿದ್ದು ತಿಳಿದ ಆನಂತರ ಅವರಿಗೆ ಸೋಂಕು ತಗಲಿರುವುದನ್ನು ಪತ್ತೆ ಹಚ್ಚಿ 17 ವಿಶೇಷ ವೈದ್ಯಕೀಯ ತಂಡಗಳನ್ನು ರಚಿಸಿ ಆ ಕುಟುಂಬದ ಸಂಪರ್ಕಕ್ಕೆ ಬಂದ ಎಲ್ಲ 900 ಜನರನ್ನು ತುರ್ತಾಗಿ ಕಂಡು ಹಿಡಿದು ತಪಾಸಣೆಗೆ ಗುರಿಪಡಿಸಲಾಯಿತು.ಹೀಗಾಗಿ ಸೋಂಕು ಹರಡುವುದನ್ನು ಆರಂಭದಲ್ಲೇ ತಡೆಯಲಾಯಿತು.

ಕೊರೋನಗಿಂತ ಮುಂಚೆ ನಿಪಾ ಜ್ವರ ವ್ಯಾಪಕವಾಗಿ ಹಬ್ಬಿದಾಗ ಅದನ್ನೂ ನಿಯಂತ್ರಿಸಿದ ಕೇರಳದ ಆರೋಗ್ಯ ಇಲಾಖೆಯ ಸಾಧನೆಯ ಹಿಂದೆ ಅಲ್ಲಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಭದ್ರ ಬುನಾದಿಯಿದೆ. ಅಲ್ಲಿ ಯಾವುದೇ ಸರಕಾರ ಬಂದರೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ದುರ್ಬಲವಾಗಲು ಬಿಡಲಿಲ್ಲ.ಆದರೆ ಉಳಿದ ರಾಜ್ಯಗಳಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕೇರಳದಷ್ಟು ಸುಸಜ್ಜಿತ ಮತ್ತು ದಕ್ಷವಾಗಿಲ್ಲ ಎಂಬುದು ಎಲ್ಲರೂ ಒಪ್ಪಲೇ ಬೇಕಾದ ಸಂಗತಿಯಾಗಿದೆ.

ಕೊರೋನ ಅಪಾಯ ಕಂಡು ಬರುತ್ತಿದ್ದಂತೆ ಕೇರಳ ಸರಕಾರ ಕೋವಿಡ್-_19ರ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡುವ ದೊಡ್ಡ ಪ್ರಚಾರಾಂದೋಲನವನ್ನೇ ನಡೆಸಿತು.ಆರೋಗ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ರಚಿಸಿ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಆ್ಯಂಬುಲೆನ್ಸ್ ಚಾಲಕರಿಗೆ ಸೂಕ್ತ ತರಬೇತಿಯನ್ನು ನೀಡಲಾಯಿತು. ವಿಪತ್ತು ನಿರ್ವಹಣಾ ಕಾಯ್ದೆ ಜಾರಿಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದು ಕ್ಷಿಪ್ರ ಕಾರ್ಯಾಚರಣೆಗೆ ಅನುಕೂಲವಾಯಿತು.ಅಂತಲೇ ಕೇರಳ ಮಾದರಿ ಈಗ ಎಲ್ಲರ ಮೆಚ್ಚುಗೆ ಗಳಿಸಿದೆ.ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೂಡ ಕೇರಳ ಸರಕಾರದ ಸಾಧನೆಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ.

ಇತ್ತೀಚಿನ ವರದಿಯ ಪ್ರಕಾರ ದಕ್ಷಿಣ ಭಾರತದಲ್ಲಿ ಕೊರೋನ ವೈರಸ್ ಹಬ್ಬುವ ಪ್ರಮಾಣ ಕರ್ನಾಟಕದಲ್ಲಿ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಕೇರಳದಿಂದ ನಾವು ಸಾಕಷ್ಟು ಕಲಿಯಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X