ಬಡವರ ಪಾಲಿನ ಅಕ್ಕಿಯನ್ನು ಶ್ರೀಮಂತರ ಕೈ ತೊಳೆಯಲು ಬಳಸಲಾಗುತ್ತಿದೆ: ಕೇಂದ್ರದ ವಿರುದ್ಧ ರಾಹುಲ್

ಹೊಸದಿಲ್ಲಿ, ಎ.21: ಸರಕಾರದ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಅಕ್ಕಿಯನ್ನು ಎಥನಾಲ್ ಆಗಿ ಪರಿವರ್ತಿಸಿ ಕೈತೊಳೆಯಲು ಬಳಸುವ ಸ್ಯಾನಿಟೈಸರ್ ತಯಾರಿಸಲಾಗುವುದು ಎಂಬ ಕೇಂದ್ರ ಸರಕಾರದ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
“ಬಡವರಿಗೆ ಸೇರಬೇಕಾದ ಅಕ್ಕಿಯನ್ನು ಶ್ರೀಮಂತರ ಕೈ ತೊಳೆಯಲು ಬಳಸಲಾಗುತ್ತಿದೆ. ದೇಶದ ಬಡಜನತೆ ಎಚ್ಚೆತ್ತುಕೊಳ್ಳುವುದು ಯಾವಾಗ? ನೀವು ಹಸಿವಿನಿಂದ ಸಾಯುತ್ತಿರುವಾಗ ಅವರು ನಿಮ್ಮ ಪಾಲಿನ ಅಕ್ಕಿಯಿಂದ ಶ್ರೀಮಂತರು ಕೈತೊಳೆಯುವ ಸ್ಯಾನಿಟೈಸರ್ ತಯಾರಿಸುತ್ತಿದ್ದಾರೆ” ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೊರೋನ ವೈರಸ್ ಲಾಕ್‌ಡೌನ್‌ನಿಂದ ದೇಶದಲ್ಲಿ ಲಕ್ಷಾಂತರ ಬಡಜನತೆ ಆಹಾರದ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ಮತ್ತು ಟೀಕೆ ಎದುರಾಗಿದೆ.
Next Story





