ಕೋವಿಡ್-19 ವಿರುದ್ಧದ ಹೋರಾಟದ ಸೇವೆಯನ್ನು ಗೌರವಿಸಿ: ಉಪರಾಷ್ಟ್ರಪತಿ
ಬೆಂಗಳೂರು, ಎ.21: ಮೈಸೂರು ಮೂಲದ ಭಾರತೀಯ ವೈದ್ಯೆ ಡಾಕ್ಟರ್ ಉಮಾ ಮಧುಸೂದನ್ ಅಮೆರಿಕದ ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗೆ ತಮ್ಮ ಪ್ರಾಣದ ಹಂಗನ್ನು ಲೆಕ್ಕಿಸದೆ ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕಾಗಿ ಅಲ್ಲಿಯ ಸ್ಥಳೀಯರು ಅವರ ಮನೆ ಮುಂದೆ ವಿಶಿಷ್ಟವಾದ ‘ಡ್ರೈವ್ ಆಫ್ ಹಾನರ್’ ಸ್ವೀಕರಿಸಿದಾರೆಂದು ತಿಳಿದು ಬಂದಿದೆ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಈಕೆಯಂತಹ ಎಲ್ಲ ಮುಂಚೂಣಿ ಯೋಧರು ಮಾಡುತ್ತಿರುವ ನಿಸ್ವಾರ್ಥ ಸೇವೆಗಳನ್ನು ನಾವು ಗೌರವಿಸಬೇಕು ಮತ್ತು ಗುರುತಿಸಬೇಕು ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
Next Story





