ವೈದ್ಯಕೀಯ ವೃತ್ತಿಪರರಿಗೆ ಪಿಪಿಇ ಕಿಟ್‌ಒದಗಿಸಿದ ರಿಯಲ್ ಕಾಶ್ಮೀರ ಎಫ್‌ಸಿ

ಶ್ರೀನಗರ, ಎ.21: ಕೋವಿಡ್-19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಶ್ರೀನಗರ ಹಾಗೂ ಜಮ್ಮು-ಕಾಶ್ಮೀರದ ವೈದ್ಯಕೀಯ ವೃತ್ತಿಪರರು ಹಾಗೂ ಪೌರ ಕಾರ್ಮಿಕರಿಗೆ ರಿಯಲ್ ಕಾಶ್ಮೀರ ಎಫ್‌ಸಿ 500 ಪಿಪಿಇ ಕಿಟ್‌ಗಳು(ವೈಯಕ್ತಿಕ ರಕ್ಷಣಾ ಸಲಕರಣೆ), 50,000 ಮಾಸ್ಕ್‌ಗಳು, 3,000 ಸ್ಯಾನಿಟೈಸರ್‌ಗಳು ಹಾಗೂ 8,000 ಕೈಗವಸುಗಳನ್ನು ಪೂರೈಕೆ ಮಾಡಲು ಮುಂದಾಗಿದೆ.
ಜಿಲ್ಲಾಡಳಿತ ಹಾಗೂ ಜಮ್ಮು-ಕಾಶ್ಮೀರದ ಸ್ಥಳೀಯ ಸೇನೆಯ ನೆರವಿನಿಂದ ರಿಯಲ್ ಕಾಶ್ಮೀರ ಎಫ್‌ಸಿ ಆಸ್ಪತ್ರೆಗಳಿಗೆ ನೇರವಾಗಿ ಕಿಟ್ ವಿತರಿಸುವ ಅಭಿಯಾನ ಕೈಗೊಂಡಿದೆ.
Next Story





