ಪುಣೆ ರೂಬಿ ಹಾಲ್ ಕ್ಲಿನಿಕ್‌ನ 25 ಸಿಬ್ಬಂದಿಗೆ ಕೊರೋನ ಸೋಂಕು
ಪುಣೆ, ಎ.21: ಪುಣೆಯ ರೂಬಿ ಹಾಲ್ ಕ್ಲಿನಿಕ್‌ನ 19 ನರ್ಸ್‌ಗಳಿಗೆ ಹಾಗೂ 6 ಪ್ಯಾರಾಮೆಡಿಕಲ್ ಸಿಬಂದಿಗಳಲ್ಲಿ ಕೊರೋನ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ.
ಮಹಾರಾಷ್ಟ್ರದ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಒಂದಾಗಿರುವ ರೂಬಿ ಹಾಲ್ ಕ್ಲಿನಿಕ್‌ನ ಜನರಲ್ ವಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ಗೆ ಕೊರೋನ ಸೋಂಕು ತಗುಲಿರುವುದು ಕಳೆದ ವಾರ ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಯ 1,000 ಉದ್ಯೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಇವರಲ್ಲಿ 19 ನರ್ಸ್‌ಗಳು ಹಾಗೂ 6 ಪ್ಯಾರಾಮೆಡಿಕಲ್ ಸಿಬಂದಿಗಳಲ್ಲಿ ಪೊಸಿಟಿವ್ ವರದಿ ಬಂದಿದೆ. ಇವರೆಲ್ಲರ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಸಿಇಒ ಬೋಮಿ ಭೋಟೆ ಹೇಳಿದ್ದಾರೆ.
ಪೊಸಿಟಿವ್ ವರದಿ ಬಂದಿರುವ ಸಿಬ್ಬಂದಿಗಳನ್ನು ಆಸ್ಪತ್ರೆಯಲ್ಲಿರುವ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದ್ದು ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಿ ಪರೀಕ್ಷೆಗೆ ಒಳಪಡಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ, ಆಸ್ಪತ್ರೆಯ ಒಂದು ವಿಭಾಗವನ್ನು ಇತರ ವಿಭಾಗದಿಂದ ಪ್ರತ್ಯೇಕಿಸಿ, ಕೊರೋನ ಸೋಂಕಿತರ ಚಿಕಿತ್ಸೆಗೆಂದೇ ಮೀಸಲಿರಿಸಲಾಗಿದೆ ಎಂದವರು ಹೇಳಿದ್ದಾರೆ.