ರಿಲಯನ್ಸ್ ಜಿಯೋದಲ್ಲಿ ಫೇಸ್ ಬುಕ್ 43,574 ಕೋಟಿ ರೂ.ಹೂಡಿಕೆ

ಹೊಸದಿಲ್ಲಿ, ಎ.22: ರಿಲಯನ್ಸ್ ಜಿಯೋದಲ್ಲಿ 43,574 ಕೋಟಿ ರೂ.(5.7 ಬಿಲಿಯನ್ ಡಾಲರ್) ಹೂಡಿಕೆ ಮಾಡುವುದಾಗಿ ಬುಧವಾರ ಫೇಸ್‌ಬುಕ್ ಘೋಷಿಸಿದೆ.
"ಇಂದು ನಾವು 5.7 ಬಿಲಿಯನ್ ಡಾಲರ್ ( 43,574 ಕೋಟಿ ರೂ.) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಸಹ ಸಂಸ್ಥೆಯಾಗಿರುವ ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಲಿಮಿಟೆಡ್ ನಲ್ಲಿ ಹೂಡಿಕೆಯನ್ನು ಘೋಷಿಸುತ್ತಿದ್ದೇವೆ ಎಂದು ಫೇಸ್ ಬುಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಹಯೋಗದ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ
1. ಫೇಸ್ ಬುಕ್ ನ ಹೂಡಿಕೆ ಜಿಯೋದಲ್ಲಿ ಶೇಕಡಾ 9.99ರಷ್ಟು ಪಾಲು ಆಗಲಿದೆ
2. ಇದು ಭಾರತದಲ್ಲಿ ಅತಿದೊಡ್ಡ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಆಗಿದೆ.
3. ಪಾಲುದಾರಿಕೆಯ ಭಾಗವಾಗಿ ಎರಡು ಕಂಪನಿಗಳು ಭಾರತದಲ್ಲಿ 60 ದಶಲಕ್ಷ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳತ್ತ ಗಮನ ಹರಿಸಲಿವೆ. ಇದರಲ್ಲಿ ಸುಮಾರು 120 ಮಿಲಿಯನ್ ರೈತರು, 30 ಮಿಲಿಯನ್ ಸಣ್ಣ ವ್ಯಾಪಾರಿಗಳು ಮತ್ತು ಅನೌಪಚಾರಿಕ ವಲಯದ ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸೇರಿವೆ.
4. ಹೂಡಿಕೆಯ ಜೊತೆಗೆ, ಜಿಯೋ ಪ್ಲಾಟ್‌ಫಾರ್ಮ್‌ಗಳು, ರಿಲಯನ್ಸ್ ರಿಟೇಲ್ ಮತ್ತು ವಾಟ್ಸಾಪ್ ಸಹಭಾಗಿತ್ವದಲ್ಲಿ "ವಾಟ್ಸಾಪ್ ಬಳಸಿ ಜಿಯೋಮಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ರಿಲಯನ್ಸ್ ರಿಟೇಲ್‌ನ ಹೊಸ ವಾಣಿಜ್ಯ ವ್ಯವಹಾರವನ್ನು ವೇಗಗೊಳಿಸಲು ಮತ್ತು ವಾಟ್ಸಾಪ್‌ನಲ್ಲಿ ಸಣ್ಣ ಉದ್ಯಮಗಳಿಗೆ ಬೆಂಬಲ ನೀಡಲು" ಸಹಭಾಗಿತ್ವವನ್ನು ಮಾಡಿಕೊಂಡಿವೆ.







