ಕೊರೋನ: ರಾಜ್ಯದಲ್ಲಿ ಹಸುಳೆ ಸಹಿತ ಏಳು ಮಂದಿಯಲ್ಲಿ ಸೋಂಕು ಪತ್ತೆ
ಒಟ್ಟು ಸೋಂಕಿತರ ಸಂಖ್ಯೆ 425ಕ್ಕೆ ಏರಿಕೆ

ಬೆಂಗಳೂರು, ಎ.22: ರಾಜ್ಯದಲ್ಲಿ ನಾಲ್ಕು ತಿಂಗಳ ಮಗುವೊಂದರ ಸಹಿತ ಮತ್ತೆ ಏಳು ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಈ ಪೈಕಿ ಐದು ಪ್ರಕರಣಗಳು ಕಲಬುರಗಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದರೆ, ಇನ್ನೆರಡು ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂಡುಬಂದಿದೆ. ಮಂಗಳವಾರ ಸಂಜೆ 5ರಿಂದ ಇಂದು ಮಧ್ಯಾಹ್ನ 12 ಗಂಟೆಯೊಳಗೆ ಏಳು ಹೊಸ ಪ್ರಕರಣಗಳು ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 425ಕ್ಕೇರಿದೆ. ಈ ಪೈಕಿ ಹದಿನೇಳು ಮಂದಿ ಮೃತಪಟ್ಟಿದ್ದರೆ, 129 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಆರೋಗ್ಯ ಬುಲೆಟಿನಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 7 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 425ಕ್ಕೆ ಏರಿದೆ. #ಮನೆಯಲ್ಲೇಇರಿ pic.twitter.com/FdOk2Ki0C0
— B Sriramulu (@sriramulubjp) April 22, 2020
Next Story







