ಕಲಬುರಗಿ: ಮಗು ಸೇರಿ ಐವರಿಗೆ ಕೊರೋನ ಸೋಂಕು ದೃಢ

ಸಾಂದರ್ಭಿಕ ಚಿತ್ರ
ಕಲಬುರಗಿ, ಎ.22: ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಸ್ವಲ್ಪಮಟ್ಟಿಗೆ ಇಳಿಮುಖವಾದಂತೆ ಕಂಡು ಬಂದಿತ್ತು. ಆದರೆ, ಬುಧವಾರ ಮತ್ತೆ ನಾಲ್ಕು ತಿಂಗಳ ಮಗು ಸೇರಿ ಐವರಿಗೆ ಕೊರೋನ ತಗುಲಿದ್ದು, ಇದರಿಂದ ಕಲಬುರಗಿ ಜನತೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ಮೂರು ದಿನಗಳಿಂದ ಕೊರೋನ ವೈರಸ್ ಸೋಂಕು ಪ್ರಕರಣ ದೃಢಪಟ್ಟಿರಲಿಲ್ಲ. ಇದರಿಂದ, ಇಡೀ ಜಿಲ್ಲೆಯ ಜನತೆ ಕೊರೋನ ವೈರಸ್ ಹತೋಟಿಗೆ ಬರುತ್ತಿದೆ. ನಮಗೆ ಹೊರ ಹೋಗಲು ಅವಕಾಶ ನೀಡುತ್ತಾರೆ ಎಂದುಕೊಂಡಿದ್ದರು. ಆದರೆ, ಮಗು ಸೇರಿದಂತೆ ಐವರಿಗೆ ಕೊರೋನ ವೈರಸ್ ತಗುಲಿದ್ದು ಬೆಳಕಿಗೆ ಬರುತ್ತಿದ್ದಂತೆಯೇ ಜನತೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ ಕೊರೋನ ವೈರಸ್ ತಗುಲಿ ಕ್ವಾರಂಟೈನ್ಗೆ ಒಳಗಾದ ಪ್ರಕರಣಗಳಲ್ಲಿ ಮಂಗಳವಾರ ಮತ್ತು ಬುಧವಾರ ಒಬ್ಬರೂ ಗುಣಮುಖರಾಗಿ ಹೊರಬಂದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Next Story





