ರಾಜಸ್ಥಾನದಲ್ಲಿ ಕೊರೋನಾ ರಣಕೇಕೆ: ಒಂದೇ ದಿನ 133 ಮಂದಿಗೆ ಸೋಕು ದೃಢ
ಸಾವಿನ ಸಂಖ್ಯೆ 27ಕ್ಕೇರಿಕೆ
![ರಾಜಸ್ಥಾನದಲ್ಲಿ ಕೊರೋನಾ ರಣಕೇಕೆ: ಒಂದೇ ದಿನ 133 ಮಂದಿಗೆ ಸೋಕು ದೃಢ ರಾಜಸ್ಥಾನದಲ್ಲಿ ಕೊರೋನಾ ರಣಕೇಕೆ: ಒಂದೇ ದಿನ 133 ಮಂದಿಗೆ ಸೋಕು ದೃಢ](/images/placeholder.jpg)
ಜೈಪುರ, ಎ.22: ಕೊರೋನಾ ವೈರಸ್ ಹಾವಳಿ ತಾಂಡವವಾಡುತ್ತಿರುವ ರಾಜ ಸ್ಥಾನದಲ್ಲಿ ಬುಧವಾರ ಓರ್ವ ಮೃತಪಟ್ಟಿದ್ದು, ರಾಜ್ಯದಲ್ಲಿ ಸೋಂಕಿನಿಂದ ಸಾವ ನ್ನಪ್ಪಿದವರ ಸಂಖ್ಯೆ 27ಕ್ಕೇರಿದೆ. ಇಂದು 133 ಹೊಸ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 133ನ್ನು ತಲುಪಿದೆ.
ಭರತಪುರ ಜಿಲ್ಲೆಯಲ್ಲಿ ಕೋವಿಡ್-19 ರೋಗಿಯೊಬ್ಬ ಇಂದು ಮೃತಪಟ್ಟಿದ್ದಾನೆ. ಜೈಪುರದಲ್ಲಿ 66 ಹಾಗೂ ಅಜ್ಮೇರ್ನಲ್ಲಿ 44 ಸೇರಿದಂತೆ, ರಾಜ್ಯದ 9 ಜಿಲ್ಲೆಯಲ್ಲಿ 133 ಮಂದಿಗೆ ಸೋಂಕು ತಗಲಿರುವ ಹೊಸ ಪ್ರಕರಣಗಳು ವರದಿಯಾಗಿವೆ ರಾಜಸ್ಥಾನ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕೊರೋನ ಶಂಕಿತ ಸುಮಾರು 4 ಸಾವಿರ ಮಾದರಿಗಳ ಪರೀಕ್ಷಾ ಫಲಿತಾಂಶಗಳು ದಿಲ್ಲಿಯ ಖಾಸಗಿ ಪ್ರಯೋಗಾಲಯದಿಂದ ಬರಲಾರಂಭಿಸಿರುವುದರಿಂದ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.
ಇಂದು ವರದಿಯಾದ 133 ಹೊಸ ಪ್ರಕರಣಳ ಪೈಕಿ 66 ಪ್ರಕರಣಗಳು ಜೈಪುರದಿಂದಲೇ ವರದಿಯಾಗಿವೆ. ಅಜ್ಮೇರ್ನಲ್ಲಿ 44, ಟೋಂಕ್ನಲ್ಲಿ ಏಳು, ಕೋಟಾದಲ್ಲಿ 6, ನಾಗಪುರ 4, ಜೋಧಪುರ 3, ಭರತಪುರ ,ಧೌಸಾ ಹಾಗೂ ಸವಾಯಿ ಮಾಧೋಪುರ ಜಿಲ್ಲೆಗಳಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ.