ಲಾಕ್‌ಡೌನ್ ಉಲ್ಲಂಘನೆ: 112 ವಾಹನಗಳು ಮುಟ್ಟುಗೋಲು
ಮಂಗಳೂರು, ಎ.22: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಉಲ್ಲಂಘನೆ ಮಾಡಿ ಸಂಚರಿಸುತ್ತಿದ್ದ 112 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಬುಧವಾರ ಮುಟ್ಟುಗೋಲು ಹಾಕಿದ್ದಾರೆ. ಈ ಪೈಕಿ 68 ದ್ವಿಚಕ್ರ ವಾಹನ, 19 ತ್ರಿಚಕ್ರ ವಾಹನ ಹಾಗೂ 25 ನಾಲ್ಕು ಚಕ್ರಗಳ ವಾಹನಗಳಾಗಿರುತ್ತವೆ ಎಂದು ಪ್ರಕಟನೆ ತಿಳಿಸಿದೆ.
Next Story





