2ನೇ ಮಹಾಯುದ್ಧದ ಬಳಿಕ ಮೊದಲ ಬಾರಿ ‘ಸ್ಪೆಲಿಂಗ್ ಬೀ’ ರದ್ದು
ವಾಶಿಂಗ್ಟನ್, ಎ. 22: ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಎರಡನೇ ಮಹಾಯುದ್ಧದ ಬಳಿಕ ಮೊದಲ ಬಾರಿಗೆ ಪ್ರತಿಷ್ಠಿತ ‘ಸ್ಪೆಲಿಂಗ್ ಬೀ’ ಸ್ಪರ್ಧೆಯನ್ನು 2020ರ ಸಾಲಿಗೆ ರದ್ದುಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಹಲವು ವರ್ಷಗಳಿಂದ ಭಾರತೀಯ-ಅಮೆರಿಕನ್ನರು ಮೇಲುಗೈ ಪಡೆಯುತ್ತಾ ಬಂದಿದ್ದಾರೆ.
ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವ ಈ ಸ್ಪರ್ಧೆಯು ಇನ್ನು 2021 ಜೂನ್ 1ರಂದು ಮರಳುತ್ತದೆ. ಆದರೆ, ಈ ವರ್ಷ ಅಂತಿಮ ಹಂತದಲ್ಲಿ ಭಾಗವಹಿಸಲು ಆಯ್ಕೆಗೊಂಡಿರುವ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಸ್ಪೆಲಿಂಗ್ ಬೀ ಅಧಿಕಾರಿಗಳು ಹೇಳಿದ್ದಾರೆ.
Next Story





