ಮಸೀದಿಗಳ ಅಧ್ಯಕ್ಷ, ಖತೀಬರಲ್ಲಿ ಸೆಂಟ್ರಲ್ ಕಮಿಟಿ ಮನವಿ
ಮಂಗಳೂರು, ಎ. 22: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸೂಚನೆ ಮತ್ತು ದ.ಕ. ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಖ ಅಹ್ಮದ್ ಅಲ್ ಅಝ್ಹರಿ ಮತ್ತು ಉಡುಪಿ ಜಿಲ್ಲಾ ಖಾಝಿ ಅಲ್‌ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಅವರ ನಿರ್ದೇಶನ ಹಾಗೂ ರಾಜ್ಯ ಮತ್ತು ಜಿಲ್ಲಾ ವಕ್ಫ್ ಅಧಿಕಾರಿಗಳ ಮನವಿಗಳನ್ನು ಪರಿಗಣಿಸಿ ಉಭಯ ಜಿಲ್ಲೆಗಳ ಎಲ್ಲಾ ಮಸೀದಿಯ ಅಧ್ಯಕ್ಷರು ಮತ್ತು ಖತೀಬರು ಮೇ 3 ರವರೆಗೆ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಮಸೀದಿಗಳಲ್ಲಿ ನಡೆಯುವ ಶುಕ್ರವಾರದ ಸಾಮೂಹಿಕ ನಮಾಝ್ ಮತ್ತು ರಮಝಾನ್‌ನ ಸಾಮೂಹಿಕ ತರಾವೀಹ್ ನಮಾಝ್ ಗಳನ್ನು ತಮ್ಮ ವನೆಯಲ್ಲಿಯೇ ನಿರ್ವಹಿಸುವಂತೆ ಜಮಾಅತ್‌ನ ಎಲ್ಲಾ ಸದಸ್ಯರಿಗೆ ತಿಳಿಸಲು ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್ ಮುಹಮ್ಮದ್ ಮಸೂದ್, ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಮನವಿ ಮಾಡಿದ್ದಾರೆ.
Next Story





