ವಾರ್ಡ್ ಮಟ್ಟದಲ್ಲಿ ತಪಾಸಣಾ ಕೇಂದ್ರ ತೆರೆಯಲು ಯುನಿವೆಫ್ ಮನವಿ
ಮಂಗಳೂರು, ಎ.22: ಕೊರೋನ ವೈರಸ್ ವಿರುದ್ಧ ಸಾರುವ ಸಮರದಲ್ಲಿ ಯಶಸ್ವಿಯಗಲು ಸರಕಾರವು ವಾರ್ಡ್ ಮಟ್ಟದಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲು ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಆಘಾತಕಾರಿ ಮಾಹಿತಿಯೊಂದನ್ನು ನೀಡಿದರು. ಅಂದರೆ, ಸುಮಾರು 736 ಮಂದಿಯನ್ನು ಕೊರೋನ ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ 186 ಮಂದಿ (ಶೇ.25)ಯಲ್ಲಿ ಸೋಂಕು ದೃಢೀಕರಣಗೊಂಡವು. ಆದರೆ ಅವರಲ್ಲಿ ಅವರಲ್ಲಿ ಯಾರಿಗೂ ಕೊರೋಣ ಲಕ್ಷಣಗಳು ಕಂಡುಬಂದಿರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಪ್ರತಿಯೊಬ್ಬರು ತಾನು ಕೊರೋನ ರೋಗಿಯೇ ಎಂಬ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಕಾರ ಲಘುವಾಗಿ ಪರಿಗಣಿಸಬಾರದು. ಪ್ರತಿಯೊಂದು ವಾರ್ಡ್ ಮಟ್ಟದಲ್ಲಿ ಕೊರೋನ ತಪಾಸಣಾ ಕೇಂದ್ರಗಳನ್ನು ಆರಂಭಿಸಬೇಕು ಎಂದು ಯುನಿವೆಫ್ ಕರ್ನಾಟಕ ಒತ್ತಾಯಿಸಿದೆ.
Next Story





