ಸ್ಪಾರ್ ಹೈಪರ್ ಮಾರ್ಕೆಟ್‌ನಿಂದ ಕಿಟ್ ವಿತರಣೆ
ಮಂಗಳೂರು, ಎ.22: ಕೊರೋನ ವೈರಸ್‌ನಿಂದಾಗಿ ತತ್ತರಿಸಿರುವ ಜನತೆಗೆ ನೆರವಾಗುವ ಸಲುವಾಗಿ ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಿನಗೂಲಿ ಕಾರ್ಮಿಕರಿಗೆ ನಗರದ ಸ್ಪಾರ್ ಹೈಪರ್ ಮಾರ್ಕೆಟ್ ವತಿಯಿಂದ 250 ದಿನಸಿ ಕಿಟ್‌ಗಳನ್ನು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರ ಸಮ್ಮುಖ ದ.ಕ. ಜಿಲ್ಲಾಧಿಕಾರಿ ಕಚೇರಿಯ ವಾರ್‌ರೂಮ್‌ನಲ್ಲಿ ಮಂಗಳವಾರ ಹಸ್ತಾಂತರಿಸಲಾಯಿತು.
ಈ ಸಂದರ್ಭ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಸ್ಪಾರ್ ಹೈಪರ್ ಮಾರ್ಕೆಟ್‌ನ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಕಡಂಬಾರ್, ಸಿಟಿ ಕೇಂದ್ರದ ಸಹಾಯಕ ವ್ಯವಸ್ಥಾಪಕ ಕಾ.ವೀ.ಕೃಷ್ಣದಾಸ್, ಆರ್ಕೀಟೆಕ್ ಧರ್ಮರಾಜ್, ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ ಮತ್ತಿತರರು ಉಪಸ್ಥಿತರಿದ್ದರು.
Next Story





