ಅಮೆರಿಕ: 24 ಗಂಟೆಗಳಲ್ಲಿ 2,751 ಸಾವು

ವಾಶಿಂಗ್ಟನ್, ಎ. 22: ಅವೆುರಿಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನ ವೈರಸ್ ಸೋಂಕಿನಿಂದಾಗಿ 2,751 ಮಂದಿ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ನಿರ್ವಹಿಸುತ್ತಿರುವ ಅಂಕಿಅಂಶಗಳು ಮಂಗಳವಾರ ಹೇಳಿವೆ.
ಇದರೊಂದಿಗೆ ದೇಶದಲ್ಲಿ ಸಾಂಕ್ರಾಮಿಕದಿಂದಾಗಿ ಮೃತಪಟ್ಟವರ ಸಂಖ್ಯೆ 44,845ಕ್ಕೆ ಏರಿದೆ.
ದೇಶದಲ್ಲಿ ಈವರೆಗೆ 8 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ಇದೇ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಸುಮಾರು 40,000 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.
ಫ್ರಾನ್ಸ್‌ನಲ್ಲಿ ಹೊಸದಾಗಿ 531 ಸಾವು
ಪ್ಯಾರಿಸ್, ಫ್ರಾನ್ಸ್‌ನಲ್ಲಿ ಮಂಗಳವಾರ ಕೋವಿಡ್-19 ಸಾಂಕ್ರಾಮಿಕದಿಂದಾಗಿ 531 ಮಂದಿ ಸಾವಿಗೀಡಾಗಿದ್ದಾರೆ. ಆಸ್ಪತ್ರೆಗಳಲ್ಲಿ 387 ಮಂದಿ ಪ್ರಾಣ ಕಳೆದುಕೊಂಡರೆ, ಆರೈಕೆ ಮನೆಗಳಲ್ಲಿ 144 ಮಂದಿ ಮೃತಪಟ್ಟಿದ್ದಾರೆ.
ಇದರೊಂದಿಗೆ ಫ್ರಾನ್ಸ್‌ನಲ್ಲಿ ಕೊರೋನ ವೈರಸ್‌ಗೆ ಬಲಿಯಾದವರ ಒಟ್ಟು ಸಂಖ್ಯೆ 20,796ಕ್ಕೆ ಏರಿದೆ ಎಂದು ದೇಶದ ಉನ್ನತ ಆರೋಗ್ಯ ಅಧಿಕಾರಿ ಜೆರೋಮ್ ಸ್ಯಾಲಮೋನ್ ಸುದ್ದಿಗಾರರಿಗೆ ತಿಳಿಸಿದರು.
ಬ್ರಿಟನ್‌ನಲ್ಲಿ ಒಂದೇ ದಿನದಲ್ಲಿ 828 ಸಾವು
ಲಂಡನ್, ಬ್ರಿಟನ್‌ನಲ್ಲಿ ಮಂಗಳವಾರ ಕೊರೋನವೈರಸ್‌ನಿಂದಾಗಿ 828 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಆ ದೇಶದಲ್ಲಿ ಆಸ್ಪತ್ರೆಗಳಲ್ಲಿ ಕೊರೋನವೈರಸ್‌ನಿಂದಾಗಿ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ 17,337ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.
ಆರೈಕೆ ಮನೆಗಳಲ್ಲಿ ಕೊರೋನವೈರಸ್‌ನಿಂದಾಗಿ ಸತ್ತವರ ಸಂಖ್ಯೆ ಇದರಲ್ಲಿ ಒಳಗೊಂಡಿಲ್ಲ. ಬ್ರಿಟನ್‌ನ ಮಂಗಳವಾರದ ದೈನಂದಿನ ಸಾವಿನ ಸಂಖ್ಯೆಯು ಹಿಂದಿನ ದಿನದ ಸಂಖ್ಯೆಗೆ ಹೋಲಿಸಿದರೆ ಗಣನೀಯ ಹೆಚ್ಚಳವಾಗಿದೆ.







