ಕೆಸಿಎಫ್ ಅಬುಧಾಬಿ: ಕೆದಿಲ, ಮಾಚಾರು ನಲ್ಲಿ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ವಿಟ್ಲ : ಕೆದಿಲ ಗ್ರಾಮದ ಕುದುಂಬ್ಲಾಡಿ - ಕಲ್ಲಸರ್ಪೆ ನಿವಾಸಿ ಆಸಿಯಮ್ಮ ಎಂಬವರಿಗೆ ಕರ್ನಾಟಕ ಕಲ್ಚರಲ್ ಫೋರಂ (ಕೆಸಿಎಫ್) ಅಬುಧಾಬಿ ಝೋನ್ ವತಿಯಿಂದ 25 ಸಾವಿರ ರೂ. ಸಹಾಯಧನ ಹಾಗೂ ಆಹಾರ ಸಾಮಗ್ರಿಗಳ ಕಿಟ್ ನೀಡಲಾಯಿತು.
ಇತ್ತೀಚೆಗೆ ಬೆಂಕಿ ಅವಘಡಕ್ಕೊಳಗಾಗಿದ್ದು ಇದೀಗ ಚೇತರಿಸಿಕೊಳ್ಳುತ್ತಿರುವ ಆಸಿಯಮ್ಮ ಅವರ ಮನೆಗೆ ತೆರಳಿ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷರಾದ ಅಬೂಬಕ್ಕರ್ ಸಜಿಪ ಸಹಾಯಧನ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಮಾಜಿ ಕೌನ್ಸಿಲರ್ ಸಿದ್ದೀಕ್ ಕೊಳಕೆ, ಹನೀಫ್ ಗೋಳಿಪಡ್ಪು, ಎಸ್ ವೈ ಎಸ್ ಪಾಟ್ರಕೋಡಿ ವಲಯ ಉಪಾಧ್ಯಕ್ಷ ಖಾಸಿಂ ಕೆ, ಕಾರ್ಯದರ್ಶಿ ಅಬ್ದುಲ್ ಜಬ್ಬಾರ್, ಎಸ್ಸೆಸ್ಸೆಫ್ ಕಾರ್ಯದರ್ಶಿ ಖಲಂದರ್, ಕೆ.ಬಿ.ಮುಹಮ್ಮದ್ ಪಾಟ್ರಕೋಡಿ ಮೊದಲಾದವರು ಉಪಸ್ಥಿತರಿದ್ಥರು.
ಬಹು ಕಾಲ ಅನಾರೋಗ್ಯದಿಂದ ಇದ್ದು ಇತ್ತೀಚೆಗೆ ನಿಧನರಾದ ಉಜಿರೆ ಸಮೀಪದ ಮಾಚಾರು - ಪಾದೆಮನೆ ನಿವಾಸಿ ಆಮೀನಾ ಅವರ ಮನೆಗೆ ತೆರಳಿ ಸಹಾಯಧನ ಹಾಗೂ ರಮಝಾನ್ ಕಿಟ್ ವಿತರಿಸಲಾಯಿತು.
Next Story





