ಕೊರೋನ ವೈರಸ್ : ರಾಜ್ಯದಲ್ಲಿ 16 ಹೊಸ ಪ್ರಕರಣಗಳು

ಬೆಂಗಳೂರು: ಎ. 22ರ ಸಂಜೆ 5ರಿಂದ ಎ 23ರ ಮಧ್ಯಾಹ್ನ 12ರ ವರೆಗೆ ರಾಜ್ಯದಲ್ಲಿ ಕೊರೋನ ವೈರಸ್ ದೃಢಪಟ್ಟ 16 ಹೊಸ ಪ್ರಕರಣಗಳು ದಾಖಲಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೋನ ವೈರಸ್ ಸೋಂಕು ಪ್ರಕರಣಗಳು 443 ತಲುಪಿದ್ದು, ಸೋಂಕಿನಿಂದ 17 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಪ್ರಕರಣಗಳ ಪೈಕಿ 141 ಮಂದಿ ಗುಣಮುಖರಾಗಿದ್ದಾರೆ.
ಬೆಂಗಳೂರು ನಗರದ ಹೊಂಗಸಂದ್ರದಲ್ಲಿ 9 ಹೊಸ ಪ್ರಕರಣಗಳು ವರದಿಯಾಗಿವೆ. ಮಂಡ್ಯ, ಹುಬ್ಬಳ್ಳಿ ಹಾಗೂ ವಿಜಯಪುರದಲ್ಲಿ ತಲಾ ಇಬ್ಬರು, ಹಾಗೂ ಬಂಟ್ವಾಳದ ಒಬ್ಬರಿಗೆ ಕೊರೋನ ವೈರಸ್ ದೃಢಪಟ್ಟಿದೆ ಎಂದು ಪ್ರಕಟನೆ ತಿಳಿಸಿದೆ.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 16 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 443ಕ್ಕೆ ಏರಿದೆ. #ಮನೆಯಲ್ಲೇಇರಿ pic.twitter.com/v37a2qzrzm
— B Sriramulu (@sriramulubjp) April 23, 2020
Next Story







