ಮಾಸ್ಕ್ ಹೊಲಿದು ಆಶ್ರಯಧಾಮಗಳಿಗೆ ವಿತರಿಸಿದ ದೇಶದ ಪ್ರಥಮ ಮಹಿಳೆ ಸವಿತಾ ಕೋವಿಂದ್
ಕೋವಿಡ್ ವಿರುದ್ಧ ಹೋರಾಟ

Photo: twitter.com/MathewLiz
ಹೊಸದಿಲ್ಲಿ : ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಹೋರಾಟದ ಅಂಗವಾಗಿ ದೇಶದ ಪ್ರಥಮ ಮಹಿಳೆ ಸವಿತಾ ಕೋವಿಂದ್ ಅವರು ಬುಧವಾರ ರಾಷ್ಟ್ರಪತಿ ಬಂಗಲೆಯಲ್ಲಿ ಮಾಸ್ಕ್ಗಳನ್ನು ಹೊಲಿದು ದೆಹಲಿ ಅರ್ಬನ್ ಶೆಲ್ಟರ್ ಇಂಪ್ರೂವ್ಮೆಂಟ್ ಬೋರ್ಡ್ನ ನಿರ್ಗತಿಕರ ಆಶ್ರಯಧಾಮಗಳಿಗೆ ವಿತರಿಸಿದರು.
ಕೆಂಪು ಬಣ್ಣದ ಬಟ್ಟೆಯ ಮಾಸ್ಕ್ನಿಂದ ಮುಖ ಮುಚ್ಚಿಕೊಂಡು ಮಾಸ್ಕ್ಗಳನ್ನು ತಯಾರಿಸುತ್ತಿರುವುದು ಕಂಡುಬಂದಿದೆ.
ಸ್ವತಃ ಮಾಸ್ಕ್ಗಳನ್ನು ಹೊಲಿಯುವ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪತ್ನಿ ಸವಿತಾ ಕೋವಿಂದ್, ಕೋವಿಡ್ ವಿರುದ್ಧ ಪ್ರತಿಯೊಬ್ಬರೂ ಸಂಘಟಿತ ಹೋರಾಟದಲ್ಲಿ ಪಾಲ್ಗೊಳ್ಳಬಹುದು ಎಂಬ ಸಂದೇಶ ಸಾರಿದ್ದಾರೆ.
ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವ ಜತೆಗೆ ಸಾಮಾಜಿಕ ಅಂತರವನ್ನು ಕಾಪಾಡುವ ಮತ್ತು ಸೋಂಕು ತಡೆಗೆ ಇತರ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಕ್ಷೇತ್ರದ ತಜ್ಞರು ಸಲಹೆ ಮಾಡಿದ್ದಾರೆ. 3 ಪದರದ ಸರ್ಜಿಕಲ್ ಮಾಸ್ಕ್ ಹಾಗೂ ಎನ್ 95 ರೆಸ್ಪಿರೇಟರ್ಗಳು ಕೋರೋನ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ವ್ಯಾಪಕವಾಗಿ ಬಳಕೆಯಲ್ಲಿವೆ.
Next Story





