‘ಜೊಯಾಲುಕ್ಕಾಸ್’ ಇದೀಗ ಆನ್‌ಲೈನ್‌ನಲ್ಲೂ ಲಭ್ಯ
ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂಗೆ 50 ರೂ. ರಿಯಾಯಿತಿ

ಮಂಗಳೂರು : ಲಾಕ್‌ಡೌನ್ ಸಂದರ್ಭದಲ್ಲಿ 'ಜೋಯಾಲುಕ್ಕಾಸ್' ಚಿನ್ನಾಭರಣ ಮಳಿಗೆಯು ಆನ್‌ಲೈನ್ ಮೂಲಕ ಚಿನ್ನಾಭರಣಗಳನ್ನು ಖರೀದಿಸುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೆ ಅಕ್ಷಯ ತೃತೀಯದ ಈ ಸಂದರ್ಭ ಚಿನ್ನಾಭರಣಗಳ ವಿಶೇಷ ಸಂಗ್ರಹವನ್ನು ಜೋಯಾಲುಕ್ಕಾಸ್ ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.
ಗ್ರಾಹಕರು ಅಕ್ಷಯ ತೃತೀಯ ದಿನದಂದು ಅಥವಾ ಅದಕ್ಕೆ ಮುಂಚೆ ಅನುಕೂಲಕ್ಕೆ ತಕ್ಕಂತೆ ಜೋಯಾಲುಕ್ಕಾಸ್ ವೆಬ್‌ಸೈಟ್ ಮೂಲಕ ಚಿನ್ನಾಭರಣಗಳನ್ನು ಖರೀದಿಸಬಹುದು.
ಗ್ರಾಹಕರು ಆನ್‌ಲೈನ್ ಮೂಲಕ ಚಿನ್ನಾಭರಣಗಳನ್ನು ಖರೀದಿ ಮಾಡುವಾಗ ಪ್ರತಿ ಗ್ರಾಂಗೆ 50 ರೂ.ನಂತೆ ರಿಯಾಯಿತಿ ನೀಡಲಾಗುವುದು ಹಾಗೂ ಡೈಮೆಂಡ್ ಜ್ಯುವೆಲ್ಲರಿ ಖರೀದಿಸುವಾಗ ವಜ್ರದ ಮೌಲ್ಯದ ಮೇಲೆ 20 ಶೇ. ರಿಯಾಯಿತಿ ಪಡೆಯಲಿದ್ದಾರೆ. ಇದಲ್ಲದೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಆನ್‌ಲೈನ್ ಮೂಲಕ ಖರೀದಿ ಮಾಡುವಾಗ ಪ್ರತಿ ಪಾವತಿ ಮೇಲೆ ಹೆಚ್ಚುವರಿಯಾಗಿ 5 ಶೇ. ಕ್ಯಾಶ್‌ಬ್ಯಾಕ್ ಕೂಡಿ ಗ್ರಾಹಕರಿಗೆ ಲಭಿಸಲಿದೆ.
ಇವಿಷ್ಟೇ ಅಲ್ಲದೆ, ಜೋಯಾಲುಕ್ಕಾಸ್ ವೆಬ್‌ಸೈಟ್ ಮೂಲಕ ಅಥವಾ ಆನ್ ಲೈನ್ ಸೈಟ್ ಗಳಾದ amazon, woohoo.in ಇತ್ಯಾದಿ ಆನ್‌ಲೈನ್ ಸೈಟ್‌ಗಳಲ್ಲಿ ಖರೀದೀಸುವಾಗ ವಿಶೇಷ ಗಿಫ್ಟ್ ವೋಚರ್ ಇತ್ಯಾದಿಗಳನ್ನು ಗ್ರಾಹಕರು ಪಡೆಯಲಿದ್ದಾರೆ. ಲಾಕ್‌ಡೌನ್ ಕೊನೆಗೊಂಡು ಶೋರೂಂಗಳು ಪ್ರಾರಂಭವಾದಾಗ ಈ ವೋಚರ್‌ಗಳನ್ನು ಬಳಸಿ ಆಯ್ಕೆಯ ಆಭರಣಗಳನ್ನು ಖರೀದಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಈ ನಡುವೆ ಚಿನ್ನದ ಬೆಲೆ ಏರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಜೋಯಾಲುಕ್ಕಾಸ್‌ನಲ್ಲಿ ಮುಂಗಡ ಬುಕ್ಕಿಂಗ್ ಸೌಲಭ್ಯ ಕೂಡ ಇದೆ. ಅದರಂತೆ ಗ್ರಾಹಕರು ಚಿನ್ನ ಖರೀದಿಸುವ ದಿನದಂದು ಚಿನ್ನದ ಬೆಲೆ ಅಧಿಕವಾಗಿದ್ದಲ್ಲಿ, ಬುಕ್ ಮಾಡಿರುವ ದಿನದಂದು ಚಾಲ್ತಿಯಲ್ಲಿದ್ದ ಕಡಿಮೆ ದರದಲ್ಲೇ ಚಿನ್ನ ಖರೀದಿಸುವ ವಿಶೇಷ ಅನುಕೂಲವನ್ನು ಜೋಯಾಲುಕ್ಕಾಸ್ ಕಲ್ಪಿಸಲಿದೆ ಎಂದು ಪ್ರಕಟನೆ ತಿಳಿಸಿದೆ.







